ಹೃತಿಕ್ ರೋಷನ್-ಕಂಗನಾ ರನೌತ್
ಹೃತಿಕ್ ರೋಷನ್-ಕಂಗನಾ ರನೌತ್

ಆಕೆ ಕಂಗನಾ!

'ಜೋಡಿ ಅಂದ್ರೆ ಹೀಗಿರ್ಬೇಕು' ಅನ್ನುವ ಹಾಗಿದ್ದ ಹೃತಿಕ್ ರೋಷನ್-ಸುಸಾನೆ ದಾಂಪತ್ಯ...

'ಜೋಡಿ ಅಂದ್ರೆ ಹೀಗಿರ್ಬೇಕು' ಅನ್ನುವ ಹಾಗಿದ್ದ ಹೃತಿಕ್ ರೋಷನ್-ಸುಸಾನೆ ದಾಂಪತ್ಯ ಮುರಿದುಬಿದ್ದಾಯ್ತು. ಅತ್ತ ಸುಸಾನೆ ಜತೆ ನಟ ಅರ್ಜುನ್ ರಾಂಪಲ್ ಹೆಸರು ತಳುಕು ಹಾಕಿಕೊಂಡಿದ್ರೆ, ಇತ್ತ ಹೃತಿಕ್ ಹಾರ್ಟಿಗೆ ಬಾಣ ಬಿಟ್ಟಿರುವ ನಟಿಯ ಹೆಸರು ಬಯಲಾಗಿದೆ.

ಹೃತಿಕ್-ಸುಸಾನೆ ಮಧ್ಯೆ 'ಆಕೆ ಎಂಟ್ರಿ ಕೊಟ್ಟ ಪರಿಣಾಮದಿಂದಲೇ 'ಡೈವೋರ್ಸ್‌' ಆಗಿದ್ದು ಅನ್ನುವುದು ಬಾಲಿವುಡ್‌ನಲ್ಲಿ ಹಳೆಯ ಸುದ್ದಿ.

'ಆಕೆ' ಯಾರು ಅನ್ನುವುದೀಗ ಜಗಜ್ಜಾಹೀರಾಗಿದೆ. 'ಆಕೆ' ಮತ್ತಾರೂ ಅಲ್ಲ ಕ್ರಿಷ್ 3 ಚಿತ್ರದಲ್ಲಿ ಹೃತಿಕ್‌ಗೆ ಚಾಲೇಂಜ್ ಹಾಕಿದ್ದ ನಟಿ ಕಂಗನಾ ರನೌತ್.

ಎರಡು ತಿಂಗಳ ಹಿಂದೆ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಂಗನಾ ತಮ್ಮ ಪ್ರೇಮ್ ಕಹಾನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. 'ನನ್ನ ಲವ್ ಲೈಫ್ ತುಂಬಾ ಚೆನ್ನಾಗಿದೆ. ಅದನ್ನ ನಾನು ಪಬ್ಲಿಕ್ ಆಗಿ ಹೇಳ್ಬೇಕೆಂದರೆ ಎಲ್ಲವೂ ಪಕ್ಕಾ ಆಗ್ಬೇಕು. ಎಲ್ಲವೂ ಸರಿಹೋಗುತ್ತೆ ಅನ್ನುವ ನಂಬಿಕೆ ಇದೆ' ಅಂತ ಹೇಳಿಕೆ ನೀಡಿದ್ದರು.

ಆದ್ರೆ, ಹೃತಿಕ್ 'ಈ ಸುದ್ದಿ ಎಷ್ಟು ಅಸಂಬದ್ಧವಾಗಿದೆ ಅಂದ್ರೆ, ನನಗೆ ಕೋಪ ಕೂಡ ಬರುತ್ತಿಲ್ಲ. ಪತ್ರಿಕೆಯವರು ಮತ್ತು ಬರೆದವರು ಭ್ರಮೆಯಲ್ಲಿದ್ದಾರಾ?' ಅಂತ ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com