

ಪಾಕಿಸ್ತಾನಿ ಬೆಡಗಿ, ಹಿಂದಿ ಹಾಗೂ ಕನ್ನಡದಲ್ಲೂ ನಟಿಸಿರುವ ನಟಿ, ವಿವಾದದಗಳಲ್ಲೇ ಮುಳುಗುವ ವೀಣಾ ಮಲ್ಲಿಕ್ ಕಮರ್ಷಿಯಲ್ ಚಿತ್ರಗಳಿಂದ ನಿವೃತ್ತಿ ಘೋಷಿಸಿದ್ದಾಳೆ. ಇದಕ್ಕೆ ಮುಸ್ಲಿಂ ಮೌಲ್ವಿಯೊಬ್ಬರು ನೀಡಿದ ಸಲಹೆಯಂತೆ. ಇನ್ನು ಮುಂದೆ ಕೇವಲ ಸಾಮಾಜಿಕ, ಧಾರ್ಮಿಕ ಚಿತ್ರಗಳಲ್ಲಷ್ಟೇ ನಟಿಸುವ ತೀರ್ಮಾನಕ್ಕೆ ಬಂದಿದ್ದಾಳೆ. ಈಗಾಗಲೇ ಒಪ್ಪಿಕೊಂಡಿರುವ ಚಿತ್ರ ಗಳಿಂದಲೂ ದೂರ ಸರಿಯುವುದಾಗಿ ತಿಳಿಸಿದ್ದಾಳೆ. ಇತ್ತೀಚೆಗೆ ತಮ್ಮ ಪತಿ ಜೊತೆ ಸೌಧಿ ಅರೇಬಿಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಂದರ್ಶನ ನೀಡಿದ ಅಲ್ಲಿನ ಪತ್ರಕರ್ತನಿಗೆ ಈ ವಿಷಯ ತಿಳಿಸಿದ್ದಾಳೆ. ಪತ್ರಿಕೆಯೊಂದರಲ್ಲಿ ನಗ್ನವಾಗಿ ಕಾಣಿಸಿಕೊಂಡಿದ್ದ ವೀಣಾ ಮಲ್ಲಿಕ್ ಅವರ ಈ ತೀರ್ಮಾನ ಅವರ ಅಭಿಮಾನಿಗಳಿಗೆ ಬೇಸರವಾಗು ವುದಂತೂ ಗ್ಯಾರಂಟಿ.