

ನನಗೆ ಹೇಗೆ ಇಷ್ಟ ಬರುತ್ತೋ ಹಾಗೆ ನಾನಿರ್ತೀನಿ. ನನ್ನ ಮನಕ್ಕೆ ಹಿಡಿಸುವ ಹಾಗೆ ಬದುಕುವವಳು ನಾನು. ಹೀಗೇ ಇರಬೇಕು, ಹೀಗೇ ನಡೆಯಬೇಕು ಎಂಬ ಯಾವ ನಿಬಂಧನೆಗಳೂ ನನ್ನ ಬದುಕಿನಲ್ಲಿ ಇಲ್ಲ ಎಂದು ಬಾಲಿವುಡ್ನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ, ಹಾಟ್ ಬೆಡಗಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾಳೆ. ಹೊಸ ಚಿತ್ರ 'ಗುಂಡೇ' ಪ್ರಚಾರದಲ್ಲಿ ತೊಡಗಿರುವ ಈಕೆ, ನೇರವಾಗಿ ತನಗೆ ಅನ್ನಿಸಿದ್ದನ್ನು ಎಲ್ಲರ ಮುಂದೆ ಹೇಳಿದ್ದಾಳೆ. ವಿಭಿನ್ನತೆಯೇ ನನ್ನ ಜೀವಾಳ. ಯಾರನ್ನೂ ನಾನು ಅನುಕರಿಸುವುದಿಲ್ಲ.ಸದ್ಯಕ್ಕೆ ನನ್ನ ಕೆರಿಯರ್ ಫಾರಂನಲ್ಲಿ ಇದೆ. ಇನ್ನೂ ಹೆಚ್ಚಿಸಿಕೊಳ್ಳುವೆ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾಳೆ. ಯಶ್ ಫಿಲಂಸ್ನ 'ಗುಂಡೇ' ಚಿತ್ರದಲ್ಲಿ ಈಕೆ ಕ್ಯಾಬರೆ ನರ್ತಕಿ ಪಾತ್ರ ನಿರ್ವಹಿಸಿದ್ದಾಳೆ.