

ಕರೀನಾಗೆ ಗೂಂಡಾಗಳ ಕಾಟವಂತೆ. ಗೂಂಡಾಗಿರಿ ಮಾಡ್ತಿರೋವ್ರ ಹೆಸರು ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್. ಮೊನ್ನೆ ತೆರೆಕಂಡ 'ಗುಂಡೇ' ಚಿತ್ರದಲ್ಲಿ ಇವರಿಬ್ಬರೂ ಪ್ರಿಯಾಂಕಾ ಛೋಪ್ರಾ ಹಿಂದೆ ಬಿದ್ದಿದ್ದು ರೀಲ್ ಕಥೆಯಾದರೆ, ರಿಯಲ್ಲಾಗಿ ಇವರ ಕ್ರಷ್ಷು ಕರೀನಾ ಮೇಲಂತೆ. ಇತ್ತೀಚಿಗೆ ಕಾಫಿ ವಿಥ್ ಕರಣ್ ಷೋನಲ್ಲಿ 'ನಾನು ಈ ರೇಂಜಿಗೆ ಬಾಡಿ ಬಿಲ್ಡ್ ಮಾಡೋಕೆ ಸ್ಪೂರ್ತಿಯೇ ಕರೀನಾ' ಎಂದು ಹೇಳಿ ತನಗೆ ಆಕೆಯ ಮೇಲಿನ ಆಕರ್ಷಣೆ ಹೇಳಿಕೊಂಡಿದ್ದ ರಣವೀರ್ ಬೆನ್ನಲ್ಲೇ ಇನ್ನೊಬ್ಬ ನಟ ಅರ್ಜುನ್ ಕಪೂರ್ ಕೂಡ 'ಕರೀನಾ ನನ್ನ ಮೊದಲ ಕ್ರಷ್. ಮೇಕಪ್ ಇಲ್ದೇನೂ ಅದ್ಭುತವಾಗಿ ಕಾಣಿಸೋ ಏಕೈಕ ಚೆಲುವೆ ಕರೀನಾ' ಎಂದೆಲ್ಲ ಸಂದರ್ಶನವೊಂದರಲ್ಲಿ ಹೇಳ್ತಾ ಇದ್ರೆ, ಸಂದರ್ಶನ ನೋಡುತ್ತಿದ್ದ ಕರೀನಾ ಕೂತಲ್ಲೇ ಅರ್ಧ ಕೆಜಿ ಜಾಸ್ತಿ ಆಗಿದ್ದಾಳಂತೆ.