

ಪಾಪ, ನಟ ರಣ್ಬೀರ್ ಕಪೂರ್ ಈಗೀಗ ಒಬ್ಬೊಬ್ಬನೇ ಓಡಾಡೋದೂ ಕಷ್ಟ ಆಗಿಬಿಟ್ಟಿದೆಯಂತೆ. ಅದರರ್ಥಅವನಿಗೆ ಜೀವಭಯ ಇದೆ ಅಂತಾನೋ ಅಥವಾ ಹುಡುಗಿಯರ ಕಣ್ಣು ಅವನ ಮೇಲೆ ಬೀಳುತ್ತಿದೆ ಅಂತಾನೋ ಅಲ್ಲ. ವಿಷಯ ಏನಂದ್ರೆ ರಣ್ಬೀರ್ ಇತ್ತೀಚಿಗೆ ಕೆಲವು ಪಾರ್ಟಿ, ಪ್ರೀಮಿಯರ್ ಶೋಗಳಲ್ಲಿ ತನ್ನ ಗರ್ಲ್ಫ್ರೆಂಡ್ ಕತ್ರಿನಾ ಕೈಫ್ ಇಲ್ಲದೆ ಒಬ್ಬನೇ ಕಾಣಿಸಿಕೊಂಡಿದ್ದಾನಂತೆ. ಹಾಗಾಗಿ ರಣ್ಬೀರ್ನ ಈ ಸಿಂಗಲ್ ಸ್ಟೇಟಸ್ ಯಾಕೋ ಎಲ್ಲರಿಗೂ ವಿಚಿತ್ರವಾಗಿ ಕಾಣುತ್ತಿದೆ. ರಣ್ಬೀರ್ ಪಾಪ ಒಂಟಿ ಒಂಟಿಯಾಗಿರುವುದು ಕೂಡ ನ್ಯೂಸೋ ನ್ಯೂಸು. ಅವಳಿಲ್ಲದೆ ಬಂದ ನೀನು ತೃಣಕ್ಕೆ ಸಮಾನ ಎಂದು ಮುಲುಗುತ್ತಿವೆಯಂತೆ ಪಾಪರಾಜಿ ಕ್ಯಾಮೆರಾಗಳು.
ಬಾಲಿವುಡ್ನ ಹಾಟ್ ನಟ ಎಂದೇ ಜನಪ್ರಿಯವಾಗಿರುವ ರಣ್ಬೀರ್ ಕಳೆದ ವಾರ ಕರಣ್ ಜೋಹರ್ ಕೊಟ್ಟಿದ್ದ ಪಾರ್ಟಿಯಲ್ಲಿ ಒಂಟಿಯಾಗಿಯೇ ಬಂದಿದ್ದನಂತೆ. ಅಲ್ಲಿ ರಣ್ಬೀರ್, ಕ್ಯಾಮೆರಾಗಳಿಂದ ತಪ್ಪಿಸಿಕೊಂಡು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದ ಬಗ್ಗೆಯೂ ಸುದ್ದಿ ಆಗಿತ್ತು. ಅದೇನು ಕರಣ್ ಜೋಹರ್ ಎಫೆಕ್ಟೋ ಏನೋ ಮೊನ್ನೆ 'ಗುಂಡೇ' ಚಿತ್ರದ ಶೋ ನೋಡಲು ಮತ್ತೆ ರಣ್ಬೀರ್ ಒಬ್ಬಂಟಿ ವಿಸಿಟ್ ಕೊಟ್ಟಿದ್ದಾನೆ. ಅದಕ್ಕೂ ಮುಂಚೆ ಯುಟಿವಿಯ ಸಿದ್ಧಾರ್ಥ್ ರಾಯ್ ಕಪೂರ್ ಕರೆದಿದ್ದ ಪಾರ್ಟಿಯಲ್ಲೂ ರಣ್ಬೀರ್ ಸಿಂಗಲ್ ಆಗಿದ್ದರಂತೆ. ಇವೆಲ್ಲವನ್ನೂ ಅಳೆದೂ ತೂಗಿ ನೋಡಿದ ಕೆಲವರು ಈಗ ರಣ್ಬೀರ್ ಒಂಟಿ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದಾರೆ. ಅಮೀರ್ಖಾನ್ ಕರೆದಿದ್ದ 'ಧೂಮ್ 3' ಪಾರ್ಟಿ ಸಮಯದಲ್ಲಿ ಒಟ್ಟಾಗಿಯೇ ಕಾಣಿಸಿಕೊಂಡಿದ್ದ ಈ ಜೋಡಿಯ ನಡುವೆ ಈಗ ಏನೋ ಕಿರಿಕ್ ಎನ್ನುತ್ತಿವೆ ಬಾಲಿವುಡ್ 'ಬಾತ್'ಶಾಗಳು.
ಇತ್ತೀಚೆಗೆ ರಣ್ಬೀರ್, ಕತ್ರಿನಾ ಜೋಡಿ ನ್ಯೂಯಾರ್ಕ್ಗೆ ಹೋದಾಗ ಏನೋ ಎಡವಟ್ಟಾಗಿ ಕೊನೆಗೆ ಅಲ್ಲಿಂದ ಇಬ್ಬರೂ ಬೇರೆ ಬೇರೆಯಾಗಿ ವಾಪಸ್ ಬಂದಮೇಲೆ ಇಷ್ಟೆಲ್ಲಾ ಗಾಸಿಪ್ ಶುರುವಾಗಿದೆ. ಇಬ್ಬರೂ ಒಟ್ಟಾಗಿ ಅಭಿನಯಿಸುತ್ತಿರುವ 'ಜಗ್ಗ ಜಾಸೂಸ್' ಚಿತ್ರದ ಸೆಟ್ನಲ್ಲೂ ಇಬ್ಬರೂ ಒಬ್ಬರನ್ನೊಬ್ಬರು ಮಾತನಾಡಿಸಲು ಕಂಜೂಸ್ ಬುದ್ಧಿ ತೋರಿಸುತ್ತಿದ್ದಾರಂತೆ. ಈ ಗಾಸಿಪ್ನ ನಡುವೆ, ರಣ್ಬೀರ್ ಒಂಟಿಯಾಗಿ ಇರುವುದಕ್ಕೆ ಕಾರಣ ಕತ್ರಿನಾ 'ಬ್ಯಾಂಗ್ ಬ್ಯಾಂಗ್' ಚಿತ್ರದ ಶೂಟಿಂಗ್ಗಾಗಿ ಶಿಮ್ಲಾಗೆ ಹೋಗಿರುವುದು ಎಂಬ ಸುದ್ದಿಗೆ ಮಾತ್ರ ಪ್ರಾಮುಖ್ಯತೆ ಸಿಗುತ್ತಿಲ್ಲ. ಯಾವುದಕ್ಕೂ ಸೇಫ್ಟಿಗೆ ಇರ್ಲಿ ಅಂತ, ಒಂಟೊಂಟೊಂಟಿ ಇರ್ಬ್ಯಾಡಿನ್ನು, ಜಂಟ್ ಜಂಟ್ ಜಂಟಿ ತಿರ್ಗಾಡ್ ಚಿನ್ನು ಎನ್ನುವ ಹಂಸಲೇಖರ ಅಡ್ವೈಸ್ ರಣ್ಬೀರ್ ಕಪೂರ್ಗೆ ಬೇಕಿದೆ ಅನ್ಸುತ್ತೆ.
= ಹರಿ