

ವಿಶ್ವಸುಂದರಿ ಐಶ್ವರ್ಯಾ ರೈ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಸುದ್ದಿ ಏನಪ್ಪ ಅಂದರೆ, ಒಬ್ಬರ ಕೈ ಹಿಡಿದು ಮತ್ತೊಬ್ಬರಿಗೆ ಕೈ ಕೊಟ್ಟಿದ್ದಾಳೆ! ಕೈ ಹಿಡಿದದ್ದು, ಕೈ ಕೊಟ್ಟದ್ದು ವೈಯಕ್ತಿಕ ಜೀವನದಲ್ಲಿ ಅಲ್ಲ. ಇದು ಸಿನಿಮಾ ಕಹಾನಿ. ಈ ಕರಾವಳಿ ಬೆಡಗಿಗೆ ಎರಡು ತಮಿಳು ಚಿತ್ರಗಳಲ್ಲಿ ನಟಿಸುವಂತೆ ಅವಕಾಶ ಬಂದಿವೆ. ಒಂದು 'ಆಪ್ತಮಿತ್ರ' ಖ್ಯಾತಿಯ ಪಿ. ವಾಸು ನಿರ್ದೇಶನದ್ದು, ಮತ್ತೊಂದು ಚಿತ್ರ ಯಾರದ್ದು ಎನ್ನುವುದು ಸಸ್ಪೆನ್ಸ್. ಈ ಎರಡು ಚಿತ್ರಗಳ ಪೈಕಿ ಒಬ್ಬರಿಗೆ ಓಕೆ ಎಂದಿದ್ದು, ಮತ್ತೊಬ್ಬರಿಗೆ ನೋ ಎಂದಿದ್ದಾಳೆ ಎಂಬುದು ಸುದ್ದಿ. 'ಸಾಹಸ ಪ್ರಧಾನ ಚಿತ್ರದಲ್ಲಿ ರೈ ನಟಿಸುತ್ತಿದ್ದಾಳೆ' ಎಂದು ಹೇಳಿಕೊಂಡಿದ್ದ ಪಿ.ವಾಸು ಅವರ ಕನಸು ಈಗ ನುಚ್ಚು ನೂರಾಗಿದೆ. ಆದರೆ, ರೈ ಒಪ್ಪಿಕೊಂಡಿರುವ ಮತ್ತೊಂದು ಚಿತ್ರ ಯಾವುದು? ಮಣಿರತ್ನಂ ನಿರ್ದೇಶನದ ಚಿತ್ರವೇ? ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆಗಳಿವು. ಆದರೆ, 'ಇರುವರ್' ಚಿತ್ರದ ನಂತರ ಮತ್ತೊಮ್ಮೆ ಮಣಿರತ್ನಂರಿಗೆ ರೈ ಕಾಲ್ ಶೀಟ್ ಸಿಕ್ಕಿರುವುದು ಮಾತ್ರ ನಿಜ.