

'ಕಾಮಸೂತ್ರ 3ಡಿ' ಸಿನಿಮಾ ನಿರೀಕ್ಷಿಸದಷ್ಟು ಜನ ಆಸಕ್ತರಾಗಿಲ್ಲ. ಎಲ್ಲವೂ ಸಪ್ಪೆ, ಸಪ್ಪೆ! ಸಿನಿಮಾ ಪೋಸ್ಟರ್ಗಳಲ್ಲಿ ಶರ್ಲೀನ್ ಚೋಪ್ರಾ ನಗ್ನವಾಗಿ ರಾರಾಜಿಸಿದ್ದುಬಿಟ್ಟರೆ ಬೇರೆ ಸದ್ದು ಮಾಡಲೇ ಇಲ್ಲ. ಆಸ್ಕರ್ ಪ್ರಶಸ್ತಿ ಬಂದಿದೆ ಎಂದು ಟಾಂಟಾಂ ಹೊಡೆದರೂ ಜನರಿಂದ ಹೆಚ್ಚಿನ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಇದು 'ಕಾಮಸೂತ್ರ' ನಿರ್ದೇಶಕನ ನಿದ್ದೆಗೆಡಿಸಿದೆ. ಚಿತ್ರ ಬಿಡುಗಡೆಗೂ ಮುನ್ನ ಸೋಲಿನ ಹಾದಿ ಹಿಡಿದಿರುವುದರಿಂದ ಹುಚ್ಚು ಹಿಡಿದಂತೆ ವರ್ತಿಸುತ್ತಿದ್ದಾನೆ. ಆಸ್ಕರ್ ಬಂದಾಗ ತಾನು ಒಳ್ಳೆ ಸಿನಿಮಾ ಮಾಡಿದ್ದೇನೆ ಎಂದು ಬಾಯಿಬಡಿದುಕೊಂಡ ರೂಪೇಶ್ ಪೌಲ್ ಈಗ ಶರ್ಲೀನ್ ಮೇಲೆ ಕೆಂಡಕಾರುತ್ತಿದ್ದಾನೆ. ಶರ್ಲೀನ್ ನಟಿಸಿದ್ದರಿಂದ 'ಕಾಮಸೂತ್ರ'ದ ಮೇಲೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ ಎಂದಿದ್ದ ಪೌಲ್ ಇದೀಗ್ ಶರ್ಲೀನ್ ಜೊತೆ ಟ್ವಿಟರ್ನಲ್ಲಿ ಜಗಳ ಶುರು ಮಾಡಿದ್ದಾರೆ.