

ದಕ್ಷಿಣ ಭಾರತ ಚಿತ್ರರಂಗದ ಟಾಪ್ ಹೀರೋಯಿನ್ ಕಾಜಲ್ ಅಗರವಾಲ್, ಬಾಲಿವುಡ್ನ 2 ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆ ಎರಡೂ ಚಿತ್ರಗಳೂ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿವೆ. ಒಂದು ಅಕ್ಷಯ್ಕಮಾರ್ ಜತೆ ನಟಿಸಿದ್ದರೆ, ಮತ್ತೊಂದು ಅಜಯ್ ದೇವಗನ್ ಜತೆ ಸಿಂಘಂನಲ್ಲಿ ನಟಿಸಿದ್ದರು. ಈಗ ಸಿಂಘಂ-2 ತೆರೆ ಮೇಲೆ ತರಲು ಭರ್ಜರಿ ತಯಾರಿ ನಡೆದಿದೆ. ನನ್ನ ನೆಕ್ಸ್ಟ್ ಫಿಲಂಗೂ ನೀನೆ ನಾಯಕಿ ಎಂದು ಅಜಯ್ ದೇವಗನ್ ಹೇಳಿದ್ದರಂತೆ. ಈಗ ಚಿತ್ರ ಸೆಟ್ಟೇರುತ್ತಿದೆ. ಕಾಜಲ್ ಅಗರ್ವಾಲ್ರನ್ನೇ ಈ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿ ಎಂದು ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಹೇಳಿದಾಗ, ಆತ ನೋ ಅಂತ ಹೇಳಿದ್ದಾರಂತೆ. ಖುದ್ದು ಅಜಯ್ ದೇವಗನ್ರೇ ಈ ರೀತಿ ಹೇಳಿಸಿದ್ದಾರೆ ಅಂತ ಬಿಟೌನ್ನಲ್ಲಿ ಗುಸು ಗುಸು ಆರಂಭವಾಗಿದೆಯಂತೆ.