

ಬಿಪಾಶಾ ಬಸು ಇತ್ತೀಚೆಗೆ ನಡೆದ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ತಮಾಷೆಯ ವಸ್ತುವಾಗಿದ್ದಳು. ಅಂದ ಹಾಗೆ ಆಗಿದ್ದಿಷ್ಟೇ, ಆಕೆ ಧರಿಸಿದ್ದ ವಸ್ತ್ರದಲ್ಲಿ ಟ್ಯಾಗ್ ಇತ್ತು. ಅಷ್ಟಕ್ಕೇ ಸುಮ್ಮನಾಗಿರುತ್ತಿದ್ದರೆ ಮುಗಿದುಬಿಡುತ್ತಿತ್ತು. ಆದರೆ, ಬಿಪಾಶಾ ಟ್ವಿಟರ್ನಲ್ಲಿ 'ಉಡುಪಿನ ಕೋಡ್ ಟ್ಯಾಗ್ ಆಗಿತ್ತೇ ವಿನಃ ಅದು ಪ್ರೈಸ್ ಟ್ಯಾಗ್ ಅಲ್ಲ!' ಎಂದು ಅವಲತ್ತುಕೊಂಡಿದ್ದಳು. 'ಕ್ರಿಯೇಚರ್' ಚಿತ್ರದ ಕುರಿತಾಗಿ ಮಾತನಾಡುವ ಸಂದರ್ಭ ಯಾರೋ 'ಆ ಟ್ಯಾಗ್ನಲ್ಲಿ 25,000 ರುಪಾಯಿ ಎಂದಿತ್ತು!' ಎಂದಿದ್ದಾರೆ. 'ನಾನು ಧರಿಸಿದ್ದ ಉಡುಪಿನ ಬೆಲೆ 1,85,000 ರುಪಾಯಿ!' ಎಂದು ಕೊಂಚ ಬಿರುಸಾಗೇ ಉಸಿರಿದ್ದಾಳೆ. ಅದೂ ಒಂಥರಾ ಕ್ರಿಯೇಚರ್ ಅಂದು ನಕ್ಕಿದ್ರೆ ಬಿಪಾಶಾಳ ಕ್ರಿಯೇಟಿವಿಟಿ ಹೆಚ್ಚಾಗುತ್ತಿತ್ತೇನೋ!