ಬರಲಿವೆ 6 ರಾಜಕೀಯ ಚಿತ್ರಗಳು

ಲೋಕಸಭಾ ಚುನಾವಣೆಯ ಕಾವು ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ. ಅದರಲ್ಲೂ ಬಾಲಿವುಡ್ಡಿಗೆ ಮತ್ತಷ್ಟು ರಂಗು ತುಂಬಿದೆ....
Updated on: 

ಲೋಕಸಭಾ ಚುನಾವಣೆಯ ಕಾವು ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ. ಅದರಲ್ಲೂ ಬಾಲಿವುಡ್ಡಿಗೆ ಮತ್ತಷ್ಟು ರಂಗು ತುಂಬಿದೆ. ಜನರೆಲ್ಲ 24x7 'ಎಲೆಕ್ಷನ್ ಎಲೆಕ್ಷನ್‌' ಅಂತಲೇ ಕನವರಿಸುತ್ತಿರುವ ಈ ಟೈಮಲ್ಲಿ ನಿರ್ದೇಶಕರು ರಾಜಕೀಯ ಆಧಾರಿತ ಚಿತ್ರಗಳನ್ನೇ ರೆಡಿಮಾಡತೊಡಗಿದ್ದಾರೆ. ಈ ನೆಪದಲ್ಲಾದರೂ ನಮ್ಮ ಸಿನಿಮಾಗಳನ್ನು ನೋಡಲಿ ಎಂಬ ತಂತ್ರವೋ ಏನೋ ಗೊತ್ತಿಲ್ಲ... ಶೀಘ್ರದಲ್ಲೇ 6 ರಾಜಕೀಯ ಕಥಾಧಾರಿತ ಚಿತ್ರಗಳು ಪ್ರೇಕ್ಷಕರ ಮುಂದಿರಲಿವೆ...


1. ಯಂಗಿಸ್ತಾನ್
ನಟ ಜಾಕಿ ಭಗ್ನಾನಿ ನಟಿಸುತ್ತಿರುವ ಮುಂದಿನ ಚಿತ್ರ 'ಯಂಗಿಸ್ತಾನ್‌'. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಬದುಕನ್ನು ಆಧರಿಸಿದ ಚಿತ್ರ ಇದು. ಮಾರ್ಚ್ 28ರಂದು ಬಿಡುಗಡೆ.



2. ಮುಂಬೈ ಸಾಗಾ
ನಿರ್ದೇಶಕ ಸಂಜಯ್ ಗುಪ್ತರ ಮುಂದಿನ ಚಿತ್ರವಿದು. ಗ್ಯಾಂಗ್‌ಸ್ಟರ್ ಮತ್ತು ಪ್ರಭಾವಿ ರಾಜಕಾರಣಿ ನಡುವಿನ ಕಥೆ ಇದರದ್ದು. ಜಾನ್ ಅಬ್ರಾಹಂ, ಅನಿಲ್ ಕಪೂರ್ ನಟಿಸಲಿದ್ದಾರೆ. ಶಿವಸೇನೆ ಮುಖಂಡ ಬಾಳಾ ಠಾಕ್ರೆಯ ಜೀವನ ಕುರಿತಾದ ಚಿತ್ರ ಇದಂತೆ.


3. ರಿವಾಲ್ವರ್ ರಾಣಿ
ಟಿಗ್ಮಾನ್ಷು ಧುಲಿಯಾ ನಿರ್ದೇಶನದ ಮುಂದಿನ ಚಿತ್ರವಿದು. ಕಂಗನಾ ರಾಣೌತ್ ನಾಯಕಿ. ಡಕಾಯಿತೆಯೊಬ್ಬಳು ರಾಜಕಾರಣಿಯಾಗಿ ಬದಲಾಗುವ ಸ್ಟೋರಿ ಈ ಚಿತ್ರದ್ದು.

4. ಪರೇಶ್ ಚಿತ್ರ
ನರೇಂದ್ರ ಮೋದಿ ಬದುಕನ್ನಾಧರಿಸಿದ ಚಿತ್ರದಲ್ಲಿ ಪರೇಶ್ ರಾವಲ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಬಹುಶಃ ಮೋದಿ ಪ್ರಧಾನಿ ಹುದ್ದೆ ಏರಿಯೇ ಏರುತ್ತಾರೆಂಬ ವಿಶ್ವಾಸದಲ್ಲಿ ಪರೇಶ್ ಇರಬಹುದೇನೋ?


5. ಮೇಡಂಜಿ
'ಫ್ಯಾಶನ್‌', 'ಹೀರೋಯಿನ್‌'ನಂಥ ಸಕ್ಸಸ್‌ಫುಲ್ ಮಹಿಳೆಯರ ಬಗ್ಗೆ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಮಧುರ್ ಭಂಡಾರ್ಕರ್ ಈಗ 'ಮೇಡಂಜಿ' ನಿರ್ದೇಶಿಸುತ್ತಿದ್ದಾರೆ. ಐಟಂಗರ್ಲ್ ರಾಜಕಾರಣಿಯಾಗಿ ಪರಿವರ್ತನೆಯಾಗುವುದು ಈ ಚಿತ್ರದ ಒನ್‌ಲೈನ್ ಸ್ಟೋರಿ. ಪ್ರಿಯಾಂಕಾ ಚೋಪ್ರಾ ಇಲ್ಲಿ ನಾಯಕಿ.


6. ಸೋನಂ ಚಿತ್ರ

ಸೋನಂ ಕಪೂರ್‌ಳ ನಟಿಸುತ್ತಿರುವ ರಾಜಕೀಯ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಅನುಜಾ ಚೌಹಾಣರ 'ಬ್ಯಾಟಲ್ ಫಾರ್ ಬಿಟ್ಟೋರಾ' ಕೃತಿ ಆಧಾರಿತ ಚಿತ್ರವಿದು. ಇದು ಲವ್‌ಸ್ಟೋರಿಯನ್ನೂ ಒಳಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com