

ಬಾಲಿವುಡ್ನಲ್ಲೂ ಎಲೆಕ್ಷನ್ ನಡೆದಿದೆ! ಯಾವ ನಟಿ ರಾಜಕಾರಣಕ್ಕೆ ಫಿಟ್ ಎಂಬ ಪ್ರಶ್ನೆಯಿಟ್ಟುಕೊಂಡು ವೆಬ್ಸೈಟೊಂದು ಸಮೀಕ್ಷೆ ನಡೆಸಿತ್ತು. ಅಲ್ಲಿ ಬಂಪರ್ ಗೆಲುವು ಸಾಧಿಸಿದ್ದು ಪ್ರಿಯಾಂಕಾ ಚೋಪ್ರಾ. ಈಕೆಗೆ ಬಿದ್ದಿದ್ದು ಬರೋಬ್ಬರಿ 986 ಮತಗಳು. ನಂತರದ ಸ್ಥಾನ ಕತ್ರೀನಾ ಕೈಫ್ (765). ಮೂರನೇ ಸ್ಥಾನದಲ್ಲಿ ಕರೀನಾ ಕಪೂರ್ (673). ಅಂದಹಾಗೆ, ಪಿಂಕಿಗೆ ಅತಿಹೆಚ್ಚು ಮತ ಹಾಕಿದವರು ತಮಿಳುನಾಡು ಕಡೆಯವರಂತೆ. ಇದಕ್ಕೂ ಕಾರಣವುಂಟು. ಪಿಂಕಿ ನಟಿಸುತ್ತಿರುವ 'ಮೇಡಂಜೀ' ಚಿತ್ರ ಜಯಲಲಿತಾ ಅವರ ಜೀವನಗಾಥೆಯನ್ನಾಧರಿಸಿದೆ. ಐಟಂ ಗರ್ಲ್ ರಾಜಕಾರಣಿಯಾಗಿ ಬದಲಾಗುವ ಈ ಕಥೆಗೆ ಪಿಂಕಿಯೇ ಸೂಕ್ತ ಎಂದು ಆರಿಸಿದ್ದು ನಿರ್ದೇಶಕ ಮಧುರ್ ಭಂಡಾರ್ಕರ್.