

ಬಾಲಿವುಡ್ನ ಮೋಸ್ಟ್ ಫ್ಯಾಶನೆಬಲ್ ತಾರೆ ಎಂದೇ ಕರೆಸಿಕೊಂಡಿರುವ ಸೋನಂ ಕಪೂರ್ ಇದೀಗ ಹೊಸ ಗೆಟಪ್ನಲ್ಲಿ ರಸಿಕರ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ. ತಮ್ಮ ಅಂದಚೆಂದವನ್ನು ಫೆಮೀನಾ ಲಗ್ಜುರಿ ಸಂಚಿಕೆಗಾಗಿ ತೆರೆದಿಟ್ಟಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಬಹಳ ಚೂಸಿಯಾಗಿದ್ದರಿಂದ ಅವಕಾಶಗಳ ಕೊರತೆ ಕಾಡುತ್ತಿದೆ ಎಂಬುದು ಸೋನಂ ಹೇಳಿಕೆ. ಹಾಗಾಗಿ ಬಿಡುವಿನ ವೇಳೆಯನ್ನು ಹಾಳುಮಾಡದೆ ಆದಷ್ಟು ತಮ್ಮ ಸೌಂದರ್ಯವನ್ನು ಪ್ರದರ್ಶಿಸುತ್ತಾ ನಿರ್ದೇಶಕ, ನಿರ್ಮಾಪಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಪೂರ್ ಖಾಂದಾನ್ಗೆ ಸೇರಿದ ಈ ಬೆಡಗಿ ತನ್ನ ಓರಗೆಯವರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರೆ. ಪಕ್ಕಾ ಪ್ರೊಫೆಶನಲ್ ಆದ ಈಕೆ ಹಿಂದೆ 'ಜಿಕ್ಯು' ನಿಯತಕಾಲಿಕೆಯಲ್ಲಿ ಹಾಟ್ ಚಿತ್ರಗಳನ್ನು ಪ್ರದರ್ಶಿಸಿದ್ದರು. ಈ ರೀತಿ ತಮ್ಮ ವೈಯ್ಯಾರ ಪ್ರದರ್ಶಿಸಲು ಅಪ್ಪನ ಅನುಮತಿಯೂ ಇದೆಯಂತೆ..