ಪುನಃ ಪುನಃ ಪೂನಂ

ನೆತ್ತಿ ಮೇಲೆ ಬಿದ್ದ ನೀರು ನೆಲಕ್ಕಿಳೀಲೇ ಬೇಕು.ಉತ್ತರಕ್ಕೆ ಬಂದವ್ಳು ದಕ್ಷಿಣಕ್ಕೆ...
ಪುನಃ ಪುನಃ ಪೂನಂ
Updated on: 

ನೆತ್ತಿ ಮೇಲೆ ಬಿದ್ದ ನೀರು ನೆಲಕ್ಕಿಳೀಲೇ ಬೇಕು...
ಉತ್ತರಕ್ಕೆ ಬಂದವ್ಳು ದಕ್ಷಿಣಕ್ಕೆ ಬರಲೇಬೇಕು. ಇದು ಇಂಡಿಯನ್ ಸಿನಿಮಾಗಳಿಗಂತೂ ಅನ್ವಯ ಆಗೇ ಆಗುತ್ತೆ.

ಸನ್ನಿ ಲಿಯೋನ್ ಬಾಲಿವುಡ್ಡಿಂದ ಕನ್ನಡದ ಡಿಕೆ ಚಿತ್ರಕ್ಕೆ ಬಂದು ಇಲ್ಲಿಂದ ಸೀದಾ ತೆಲುಗಿಗೆ ಹೋಗಿ ಕರೆಂಟ್ ಥೀಗಾ ಚಿತ್ರದಲ್ಲಿ ನಟಿಸಿಹೋಗಿದ್ದಾಳೆ.

ಈಗ ಕಾಂಟ್ರವರ್ಸಿ ಕ್ವೀನ್ ಪೂನಂ ಪಾಂಡೆ ಸರದಿ. ದಿವಂಗತ ಜಂಗಲ್ ಜಾಕಿ ರಾಜೇಶನ ಲವ್ ಈಸ್ ಪಾಯಿ ಸನ್ ಎಂಬ ಕನ್ನಡ ಚಿತ್ರದಲ್ಲಿ ಕುಣಿದುಹೋದ ಪೂನಂ ಈಗ ತೆಲುಗಿನಲ್ಲಿ ಮಾಲಿನಿ ಅಂಡ್ ಕೋ ಚಿತ್ರಕ್ಕೆ ನಾಯಕಿಯಾಗಿದ್ದಾಳೆ.

ಟೆರರಿಸಂ ಬಗೆಗಿನ ಚಿತ್ರದಲ್ಲಿ ರೊಮ್ಯಾನ್ಸ್ ಮತ್ತು ಫ್ಯಾಂಟಸಿಗಳು ಇರೋದ್ರಿಂದ ಪೂನಂ ಸೂಕ್ತ ಆಯ್ಕೆ ಎಂದು ಪರಿಗಣಿಸಿದರಂತೆ ನಿರ್ದೇಶಕ ವೀರು. ಇಷ್ಟು ದಿನ ಬಟ್ಟೆ ಬಿಚ್ತೀನಿ ಅಂತ ಹೆದರಿಸುತ್ತಿದ್ದ ಪೂನಂ ಈ ಚಿತ್ರದಲ್ಲೂ ಅದೇ ಭಯೋತ್ಪಾದನೆ ಮಾಡ್ತಾಳೋ ಅಥವಾ ಹೊಸ ಗಿಮಿಕ್ಕಿದೆಯೋ ಗೊತ್ತಿಲ್ಲ.

ನಶಾ ಚಿತ್ರ ನಶೆಯೇರಿಸುವಲ್ಲಿ ವಿಫಲವಾಗಿದ್ದರಿಂದ ಕಡೆಪಕ್ಷ ದಕ್ಷಿಣದಲ್ಲಿರೋ ಡಿಮ್ಯಾಂಡಿನ ಲಾಭವನ್ನಾದರೂ ಪಡೆಯೋ ಯೋಚನೆ ಮಾಡಿದ್ದಾಳೆ ಪೂನಂ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com