ತಂದೆಗೆ ನಡೆಯೋದನ್ನ ಹೇಳಿಕೊಟ್ಟ ಬಾಲಿವುಡ್ ತಾರೆ!

ಚಿಕ್ಕಂದಿನಲ್ಲಿ ಮಕ್ಕಳಿಗೆ ತಂದೆ ಕೈ ಹಿಡಿದು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯೋದನ್ನು ಕಲಿಸುತ್ತಾನೆ. ಇದು ಎಂದಿಗೂ ಬದಲಾಗದ ರೂಢಿ. ಮಕ್ಕಳೇ ತಂದೆಗೆ ನಡೆಯಲು ಕಲಿಸೋದನ್ನು ಎಲ್ಲಾದರೂ ಕೇಳಿದ್ದೀರಾ? ವೃದ್ಧಾಪ್ಯದಲ್ಲೋ ಕಾಯಿಲೆಯಲ್ಲೋ ನಡೆಯಲಾಗದ ಸ್ಥಿತಿ...
ಸೋನಾಕ್ಷಿ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ
ಸೋನಾಕ್ಷಿ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ

ಚಿಕ್ಕಂದಿನಲ್ಲಿ ಮಕ್ಕಳಿಗೆ ತಂದೆ ಕೈ ಹಿಡಿದು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯೋದನ್ನು ಕಲಿಸುತ್ತಾನೆ. ಇದು ಎಂದಿಗೂ ಬದಲಾಗದ ರೂಢಿ. ಮಕ್ಕಳೇ ತಂದೆಗೆ ನಡೆಯಲು ಕಲಿಸೋದನ್ನು ಎಲ್ಲಾದರೂ ಕೇಳಿದ್ದೀರಾ? ವೃದ್ಧಾಪ್ಯದಲ್ಲೋ ಕಾಯಿಲೆಯಲ್ಲೋ ನಡೆಯಲಾಗದ ಸ್ಥಿತಿಯಲ್ಲಿ ಕೈ ಹಿಡಿದು ನಡೆಸುವುದು ಬೇರೆ ಮಾತು.

ಬಾಲಿವುಡ್ ಮೂಗುತಿ ಸುಂದರಿ ಸೋನಾಕ್ಷಿ ಸಿನ್ಹಾ ತನ್ನ ತಂದೆಗೆ ನಡೆಯುವುದನ್ನು ಕಲಿಸಿ ಸುದ್ದಿ ಮಾಡಿದ್ದಾಳೆ. ಮಾತಿನ ಮಲ್ಲ ಹಿರಿಯನಟ ಶತ್ರುಘ್ನ ಸಿನ್ಹಾ ಗೆ ನಡೆಯೋಕೆ ಬರಲ್ವಾ ಅಂತ ಕೇಳಬೇಡಿ. ಅವರ ಚಿತ್ರಗಳಲ್ಲಿ ಅವರ ನಡೆ ನುಡಿ ಮ್ಯಾನರಿಸಂಗಳೇ ಹೈಲೈಟಾಗಿದ್ದವು.

ಈಗ ಸೋನಾಕ್ಷಿ ಕಲಿಸಿದ್ದು, ರ್ಯಾಂಪ್ ಮೇಲೆ ಹೆಜ್ಜೆ ಇಟ್ಟು ನಡೆಯುವುದು ಹೇಗೆ ಎಂದು. ಶಬಾನಾ ಆಜ್ಮಿ ತಂಡ ಆಯೋಜಿಸಿದ್ದ ಮಿಜ್ವಾನ್-ದ ಲೆಗೇಸಿ ಸಮಾರಂಭದಲ್ಲಿ ಸೋನಾಕ್ಷಿ ಜತೆ ರ್ಯಾಂಪ್ ಮೇಲೆ ನಡೆಯಲು ತಿಣುಕಾಡಿದ ಶತ್ರುಘ್ನಾ ಸಿನ್ಹಾಗೆ ಸೋನಾಕ್ಷಿ ಕೈ ಹಿಡಿದುಕೊಂಡು, ರ್ಯಾಂಪ್ ವಾಕ್ ಕಲಿಸಿದ್ದಾಳೆ. ನಡೆದ ನಂತರ ಒಂದು ಕ್ಷಣ ಭಾವುಕರಾದ ಶತ್ರುಘ್ನ ಸೋನಾಕ್ಷಿಯನ್ನು ಬಾಲ್ಯದಲ್ಲಿ ನಡೆಸಿದ್ದು ಎತ್ತಾಡಿಸಿದ್ದು ಎಲ್ಲವನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಸೋನಾಕ್ಷಿಯೇ ಟ್ವೀಟ್ ಮಾಡಿದ್ದಾಳೆ. ಅಂದ ಹಾಗೆ ಮನಿಷ್ ಮಲ್ಹೋತ್ರ ಡಿಸೈನ್ ಮಾಡಿದ್ದ ಈ ಷೋದಲ್ಲಿ ಬಚ್ಚನ್ ಕುಟುಂಬ, ಅನಿಲ್ ಕಪೂರ್ ಮತ್ತು ಸೋನಮ್, ಜಾವೆದ್ ಅಕ್ತರ್ ಹಾಗೂ ಫರ್ಹಾನ್ ಅಕ್ತರ್ ಕೂಡ ರ್ಯಾಂಪ್ ವಾಕ್ ಮಾಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com