ಸ್ಕ್ರಿಪ್ಟ್ ಬಯಸಿದರೆ ಬೆತ್ತಲಾಗಬೇಕು!

ಬಾಲಿವುಡ್ ಈಗ ಬೆತ್ತಲೆಯಾಗಿದೆ. ಇಲ್ಲಿ ಸ್ಕ್ರಿಪ್ಟ್ ಬಯಸಿದರೆ ನಟಿಯರಿಗೆ ಎಷ್ಟು ಹೇಳುತ್ತಾರೋ ಮಾಡು ಎನ್ನುತ್ತಾರೋ ಅಷ್ಟೂ ಎಕ್ಸ್ಪೋಸ್ ಮಾಡಬೇಕು...
ಏಕ್ತಾ ಕಪೂರ್
ಏಕ್ತಾ ಕಪೂರ್
Updated on: 

ಮುಂಬೈ: ಬಾಲಿವುಡ್ ಈಗ ಬೆತ್ತಲೆಯಾಗಿದೆ. ಇಲ್ಲಿ ಸ್ಕ್ರಿಪ್ಟ್ ಬಯಸಿದರೆ ನಟಿಯರಿಗೆ ಎಷ್ಟು ಹೇಳುತ್ತಾರೋ ಮಾಡು ಎನ್ನುತ್ತಾರೋ ಅಷ್ಟೂ ಎಕ್ಸ್ಪೋಸ್  ಮಾಡಬೇಕು. ಅವಾಚ್ಯ ಶಬ್ದಗಳನ್ನು ಸಲೀಸಾಗಿ ಆಡಬೇಕು. `ಆಗಲ್ಲ' ಎಂದು ಕೆಮ್ಮಂಗೇ ಇಲ್ಲ. ಬಾಲಿವುಡ್‍ನಲ್ಲಿ ಮಾದಕ ಸಿನಿಮಾಗಳನ್ನೇ ಹೆಚ್ಚು ನಿರ್ಮಿಸುವ ಏಕ್ತಾ ಕಪೂರ್ ಮಾತುಗಳಿವು. ಸ್ಕ್ರಿಪ್ಟ್ ಬಯಸಿದರೆ ಬೆತ್ತಲಾಗುವುದಕ್ಕೂ ಹೇಸಬಾರದು ಎನ್ನುವುದರೊಂದಿಗೆ ಏಕ್ತಾ ಬಾಲಿವುಡ್‍ಗೆ ಹೊಸ ತಿದ್ದುಪಡಿಯನ್ನೇ ತರುತ್ತಿದ್ದಾರೆ. ಬಾಲಾಜಿ ಮೋಷನ್ ಪಿಚ್ಚರ್ಸ್ ಅಡಿಯಲ್ಲಿ
ತಯಾರಾಗುತ್ತಿರುವ ಇವರ ಮುಂದಿನ ಸಿನಿಮಾ XXX ಗೆ ಹೊಸ ಮುಖ ಗಳನ್ನು ಪರಿಚಯಿಸಲಾಗುತ್ತಿದೆ. ಅವರು ಈ ಎಲ್ಲ ನಿಯಮಗಳನ್ನು ಒಪ್ಪಿಯೇ  ಬಂದಿದ್ದಾರಂತೆ. ಈ ಹಿಂದೆ ರಾಗಿಣಿ ಎಮ್ ಎಮ್  ಎಸ್2ದಲ್ಲಿ ಎಕ್ಸ್ಪೋಸ್ ಮಾಡುವ ದೃಶ್ಯಕ್ಕೆ ನಟಿ ಸನ್ನಿ ಲಿಯೋನ್‍ರನ್ನು ಒಪ್ಪಿ ಸುವುದಕ್ಕೆ ಸಾಕುಸಾಕಾಗಿತ್ತಂತೆ. ಹಾಗಾಗಿ ಮೊದಲೇ ಇಂಥದ್ದೊಂದು ನಿಯಮ ಹೇಳಿ ಸಹಿ ಮಾಡಿಸಲಾಗುತ್ತಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com