
ಅಪ್ಪಟ ಕ್ರೀಡಾ ಬದುಕಿನ ಚಿತ್ರ`ಮೇರಿಕೋಮ್'ದಲ್ಲಿ ಅಭಿನಯಿಸಿ ಯಶಸ್ಸು, ಪ್ರಶಂಸೆಗಳಿಸಿದ್ದ ಪ್ರಿಯಾಂಕಾ ಚೋಪ್ರಾ, ನ್ಯಾಷನಲ್ ಅವಾರ್ಡ್ ಕೈತಪ್ಪಿದಾಗ ಖಿನ್ನಳಾಗಿದ್ದು ಸುಳ್ಳಲ್ಲ. ಅದಕ್ಕೆ ಪುಷ್ಟಿ ನೀಡುವಂತೆ `ನಾನು ಸೋಲನ್ನು ದ್ವೇಷಿಸುತ್ತೇನೆ' ಎಂದು ಹೇಳಿಕೆ ನೀಡಿ ಸಿನಿ ಪುಟಗಳಲ್ಲಿ ಸುದ್ದಿಯಾಗಿದ್ದರು. ಆದರೆ ಮುಂದೆ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂಬ ಗುಟ್ಟನ್ನು ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ.
ಸದ್ಯ ಪಿಗ್ಗಿಗೆ ಬಂಪರ್ ಪಾತ್ರವೊಂದು ಸಿಕ್ಕಿದೆಯಂತೆ. ನಿರ್ದೇಶಕ ಪ್ರಕಾಶ್ ಝಾ ತಮ್ಮ ಮುಂದಿನ ಚಿತ್ರ ಗಂಗಾಜಲ್-2ನಲ್ಲಿ ಪ್ರಿಯಾಂಕಾರನ್ನು ಪೊಲೀಸ್ ಅಧಿಕಾರಿಯಾಗಿ ತೋರಿಸಲು ಬಯಸಿದ್ದಾರೆ. ಈ ಹಿಂದೆ ಗಂಗಾಜಲ್ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ್ದ ಪ್ರಕಾಶ್ ಝಾ ಮತ್ತೆ ಅದೇ ತಂಡ ದೊಂದಿಗೆ ಮುಂದುವರಿದ ಭಾಗದ ಚಿತ್ರೀಕರಣಕ್ಕೆ ಪ್ಲಾನ್ ಹಾಕಿದ್ದಾರಂತೆ.
ಗಂಗಾಜಲ್2ನಲ್ಲಿ ಅಜಯ್ ಗೆ ನಾಯಕಿಯಾಗಿ ಪ್ರಿಯಾಂಕಾ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಚಿತ್ರದಲ್ಲಿ ಲೇಡಿ ಪೊಲಿಸ್ ಆಗಿ ನಟಿಸಲು ಪ್ರಿಯಾಂಕಾ ಜತೆ ಗಂಗಾಜಲ್ 2 ಚಿತ್ರತಂಡ ಮಾತುಕತೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ಲಭಿಸಿದೆಯಂತೆ. ಪಿಗ್ಗಿ ಹಿಂದೆ `ಗುಂಡೆ' ಹಿಟ್ ಚಿತ್ರದಲ್ಲಿ ಲವ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು ಈಗ ಮತ್ತೊಮ್ಮೆ ಪೊಲೀಸ್ ಲುಕ್‍ನಲ್ಲಿ ಮಿಂಚುವ ಸಾಧ್ಯತೆ ದಿಟವಾಗಿದೆ.
Advertisement