
ನಟನಾ ಕೌಶಲ್ಯಕ್ಕಿಂತಲೂ ಡ್ರೆಸ್ ಸೆನ್ಸ್ ಹಾಗೂ ವಟವಟ ಎನ್ನೋದ್ರಿಂದಲೇ ಸುದ್ದಿಯಾಗುವ ಸೋನಮ್ ಕಪೂರ್, ಸಲ್ಮಾನ್ ಗೆ ಡ್ರೆಸ್ ಅಡ್ವೈಸ್ ಮಾಡ್ಲಿಕ್ಕೆ ಆರಂಭಿಸಿದ್ದಾಳೆ. `ಪ್ರೇಮ್ ರತನ್ ಧನ್ ಪಾಯೋ' ಚಿತ್ರದ ಶೂಟಿಂಗ್ ಗೆ ಸಲ್ಮಾನ್ ಒಂದೊಳ್ಳೆ ಜರ್ಕೀನ್ ಹಾಕ್ಕೊಂಡು ಬಂದಿದ್ನಂತೆ. ಚೆನ್ನಾಗಿದೆ ಎಂದಿದ್ರೆ ಸಾಕಿತ್ತು. ಅದಕ್ಕೆ ಹಿಂಗಿದ್ದು ಪ್ಯಾಂಟ್ ಹಾಕ್ಕೋಬೇಕು, ಹಂಗಿದ್ದು ಶರ್ಟ್ ಹಾಕ್ಬೇಕು ಎಂದು ಒಂದಿಷ್ಟು ಪುಕ್ಕಟೆ ಸಲಹೆ ನೀಡಿದ್ದಾಳೆ.
ಮುಂದಿನ ಸಲ ದುಬೈಗೆ ಹೋದಾಗ ಅವನಿಗೆ ಇವಳೇ ಶಾಪಿಂಗ್ ಮಾಡ್ತಾಳಂತೆ. ಅಲ್ಲದೇ ಸಲ್ಮಾನ್ ಗೆ ವಾಡ್ರೋಬ್ ನ ಪಿಕ್ಚರ್ಸ್ ಕಳಿಸು ಅಂತ ದುಂಬಾಲು ಬಿದ್ದಿದ್ದಾಳಂತೆ. ಈ `ದಬಾಂಗ್' ಹೀರೋ ತನ್ನದೇ ಬ್ರ್ಯಾಂಡ್ ಬೀಯಿಂಗ್ ಹ್ಯೂಮನ್‍ಗೆ ಸ್ಟಿಕ್ ಆನ್ ಆಗಿದ್ರಿಂದ ಸೋನಮ್ ಸಲಹೆ ಕೇಳ್ತಾನಾ?
Advertisement