'ಶಾಂದಾರ್' ಟ್ರೇಲರ್ ೨೧ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ

ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ನಟಿ ಆಲಿಯಾ ಭಟ್ ನಿರ್ದೇಶನದ 'ಶಾಂದಾರ್' ಸಿನೆಮಾ ಟ್ರೇಲರ್ ಯೂಟ್ಯೂಬಿನಲ್ಲಿ ೨೧ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.
ಶಾಂದಾರ್ ಚಿತ್ರದ ಪ್ರಚಾರದಲ್ಲಿ ಶಾಹಿದ್ ಕಪೂರ್ ಅವರಿಗೆ ಚುಂಬಿಸಿದ ಆಲಿಯಾ ಭಟ್
ಶಾಂದಾರ್ ಚಿತ್ರದ ಪ್ರಚಾರದಲ್ಲಿ ಶಾಹಿದ್ ಕಪೂರ್ ಅವರಿಗೆ ಚುಂಬಿಸಿದ ಆಲಿಯಾ ಭಟ್

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ನಟಿ ಆಲಿಯಾ ಭಟ್ ನಿರ್ದೇಶನದ 'ಶಾಂದಾರ್' ಸಿನೆಮಾ ಟ್ರೇಲರ್ ಯೂಟ್ಯೂಬಿನಲ್ಲಿ ೨೧ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

ಮೂರು ನಿಮಿಷ ಉದ್ದವಿರುದ ಈ ಟ್ರೇಲರ್ ಯುಟ್ಯುಬಿನಲ್ಲಿ ಆಗಸ್ಟ್ ೧೧ ರಂದು ಬಿಡುಗಡೆಯಾಗಿತ್ತು.

ಇದರಿಂದ ಸಂತಸಗೊಂಡಿರುವ 'ಹೈವೇ' ನಟಿ ಆಲಿಯಾ ಗುರುವಾರ ಟ್ವಿಟ್ಟರ್ ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. "೪೮ ಘಂಟೆಗಳಿಗೂ ಕಡಿಮೆ ಅವಧಿಯಲ್ಲಿ ೨೦ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ. ನಿಮ್ಮೆಲ್ಲರಿಗೂ ಶಾಂದಾರ್ ಚುಂಬನ ನೀಡಬೇಕೆನಿಸುತ್ತಿದೆ ಹೆಹೆಹೆ #ಶಾಂದರ್" ಎಂದು ಅವರು ಟ್ವೀಟ್ ಮಾಡಿದ್ದರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com