
ಮುಂಬಯಿ: ಬಿ ಟೌನ್ ಬಿಗ್ ಬಿ ಅಮಿತಾಬ್ ಬಚ್ಚನ್, ಹಿರಿಯ ನಟರಾದ ರಿಶಿ ಕಪೂರ್, ಫರಾನ್ ಅಖ್ತಾರ್ ಸೇರಿದಂತೆ ಹಲವು ಬಾಲಿವುಡ್ ಕಲಾವಿದರು, ಮಳೆಯಿಂದ ಪ್ರವಾಹ ಉಂಟಾಗಿರುವ ತಮಿಳುನಾಡು ಪ್ರವಾಹ ಸಂತ್ರಸ್ತರ ಸುರಕ್ಷತೆಗಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಪ್ರವಾಹ ಸಂತ್ರಸ್ತರ ರಕ್ಷಣೆಗಾಗಿ ಹರ ಸಾಹಸ ಪಡುತ್ತಿರುವ ರಕ್ಷಣಾ ಪಡೆಯನ್ನು ಹೊಗಳಿರುವ ಅಮಿತಾಬ್ ಬಚ್ಚನ್ ಟ್ವಿಟ್ಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ರವಾಹ ಸಂತ್ರಸ್ತರು ಸುರಕ್ಷಿತವಾಗಿರಲಿ, ಆದಷ್ಟು ಶೀಘ್ರವೇ ವಾತಾವರಣ ಶಾಂತವಾಗಲೆಂದು ಅಮಿತಾಬ್ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ನಟಿ ಹಾಗೂ ನಿರ್ಮಾಪಕಿ ದಿಯಾ ಮಿರ್ಜಾ, ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವ ಪರಿಹಾರ ಕಾರ್ಯಕರ್ತರಿಗೆ ವಂದನೆ ಸಲ್ಲಿಸಿದ್ದಾರೆ.
ಇನ್ನು ರಿಶಿ ಕಪೂರ್ ಕೂ ತಮ್ಮ ಬ್ಲಾಗ್ ನಲ್ಲಿ ಚೆನ್ನೈ ಹೆಲ್ಪ್ ಲೈನ್ ನಂಬರ್ ಗಳನ್ನು ಪೋಸ್ಟ್ ಮಾಡಿ, ಶೇರ್ ಮಾಡುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಅಭಿಷೇಕ್ ಬಚ್ಚನ್, ವರುಣ್ ಧವನ್, ಪರ್ಹಾನ್ ಸೇರಿದಂತೆ ಹಲವು ನಾಯಕ ನಟರು ತಮಿಳುನಾಡು ಪ್ರವಾಹ ಸಂತ್ರಸ್ತರಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ
Advertisement