
ಮುಂಬೈ: ಪ್ರವಾಹಪೀಡಿತ ತಮಿಳುನಾಡಿಗೆ ನಟ ಶಾರುಕ್ ಖಾನ್ ಮುಖ್ಯ ಭೂಮಿಕೆಯಲ್ಲಿರುವ ಬಾಲಿವುಡ್ ಸಿನೆಮಾ 'ದಿಲ್ವಾಲೆ' ತಂಡ ೧ ಕೋಟಿ ರೂ ಸಹಾಯಧನ ನೀಡಿದೆ.
ಚೆನ್ನೈ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈ ಪ್ರವಾಹದಿಂದ ಸುಮಾರು ೩೨೫ ಜನ ಮೃತಪಟ್ಟು ಲಕ್ಷಕ್ಕೂ ಹೆಚ್ಚು ಜನಕ್ಕೆ ಹಾನಿಯಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಶಾರುಕ್ ಖಾನ್ ಬರೆದಿರುವ ಪತ್ರದಲ್ಲಿ "ಪ್ರಕೃತಿಯ ಮುನಿಸಿನಿಂದ ಚೆನ್ನೈ ನಗರಕ್ಕೆ ಉಂಟಾಗಿರುವ ಹಾನಿಯಿಂದ ನಮಗೆ ಬೇಸರವಾಗಿದೆ.
"ಇದೇ ಸಮಯದಲ್ಲಿ, ಚೆನ್ನೈ ಜನ ಧೈರ್ಯ ತೋರಿ ಪರಸ್ಪರ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಮತ್ತು ಹೆಮ್ಮೆ ಎನಿದುತ್ತದೆ.
"ಈ ವಿಪತ್ತು ನಿರ್ವಹಣೆಗಾಗಿ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಭಾರಿ ಕ್ರಮಗಳಿಗೆ ಪ್ರಶಂಸೆ ವ್ಯುಕ್ತಪಡಿಸುತ್ತ ನಟ-ನಿರ್ಮಾಪಕ ಮತ್ತು ಚಿತ್ರತಂಡ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೧ ಕೋಟಿ ರೂ ದೇಣಿಗೆ ನೀಡುತ್ತಿದ್ದೇವೆ" ಎಂದು ಬರೆದಿದ್ದಾರೆ.
Advertisement