ಸಲ್ಲು, ಬಿಪ್ಸ್‌ಗೆ ಮಕ್ಕಳು ಬೇಕಂತೆ..!

ಬಾಲಿವುಡ್ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ನಟ-ನಟಿ ಎಂದರೆ ಸಲ್ಮಾನ್ ಖಾನ್ ಮತ್ತು ಬಿಪಾಶ ಬಸು ಎನ್ನಬಹುದು. ಏಕೆಂದರೆ ಪ್ರೀತಿಸಿ ಬಹುತೇಕ ಮದುವೆಯ..
ಬಿಪಾಶ ಮತ್ತು ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)
ಬಿಪಾಶ ಮತ್ತು ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)
Updated on

ಮುಂಬೈ: ಬಾಲಿವುಡ್ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ನಟ-ನಟಿ ಎಂದರೆ ಸಲ್ಮಾನ್ ಖಾನ್ ಮತ್ತು ಬಿಪಾಶ ಬಸು ಎನ್ನಬಹುದು. ಏಕೆಂದರೆ ಪ್ರೀತಿಸಿ ಬಹುತೇಕ ಮದುವೆಯ ತನಕ ಹೋಗಿ ಕೊನೆಕ್ಷಣದಲ್ಲಿ ಇವರ ಮದುವೆ ಮುರಿದು ಬೀಳುತ್ತಿತ್ತು. ಆದರೆ ಪ್ರಶ್ನೆ ಈಗ ಅದಲ್ಲ. ಬಾಲಿವುಡ್ ನ ಈ ಇಬ್ಬರು ನಟರಲ್ಲಿ ಒಂದು ಸಮಾನ ಹೋಲಿಕೆ ಕಂಡುಬಂದಿದ್ದು, ಈ ಇಬ್ಬರು ನಟರಿಗೆ ಮಕ್ಕಳು ಬೇಕಂತೆ..

ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಟ ಸಲ್ಮಾನ್ ಖಾನ್, ತಮಗೆ ಮದುವೆಗಿಂತ ಮಕ್ಕಳೇ ಮುಖ್ಯ ಎಂದು ಹೇಳಿದ್ದರು. 'ದೇವರು ನನ್ನ ಜೀವನದಲ್ಲಿ ಸಾಕಷ್ಟು ಆಟವಾಡುತ್ತಿದ್ದು, ಪ್ರತೀ ಬಾರಿ ಮದುವೆಗೆ ಹತ್ತಿರವಾಗಿ ಮತ್ತೆ ದೂರವಾಗುತ್ತಿದ್ದೇನೆ. ಆದರೆ ಒಂದು ದಿನ ಅದೃಷ್ಟ ನನ್ನ ಕೈ ಹಿಡಿಯಬಹುದು. ಅದು ಶೀಘ್ರದಲ್ಲೇ ಆಗಬಹುದು ಎಂದು ಭಾವಿಸುತ್ತಿದ್ದೇನೆ. ಆದರೆ ನನ್ನ ಪ್ರಕಾರ ಮದುವೆಗಿಂತ ಮಕ್ಕಳು ಪಡೆಯುವುದು ನನ್ನ ಪ್ರಮುಖ ಆದ್ಯತೆಯಾಗಿರುತ್ತದೆ ಎಂದು ಹೇಳಿದ್ದಾರೆ.

ಇನ್ನು ಇಂತಹುದೇ ಅಭಿಪ್ರಾಯವನ್ನು ನಟಿ ಬಿಪಾಶ ಕೂಡ ವ್ಯಕ್ತಪಡಿಸಿದ್ದು, ಖಾಸಗಿ ಮ್ಯಾಗಜಿನ್‌ವೊಂದಕ್ಕೆ ಸಂದರ್ಶನ ನೀಡುವ ವೇಳೆ ತಮಗೆ ಮದುವೆಗಿಂತ ಮಕ್ಕಳ ಮೇಲೆ ಪ್ರೀತಿ ಹೆಚ್ಚು ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಮದುವೆಯಾಗ ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ ಬಿಪಾಶ, ಹೌದು ನಾನು ಮದುವೆಯಾಗಲು ಇಚ್ಛಿಸುತ್ತೇನೆ. ಅದಕ್ಕಿಂತಲೂ ಮಿಗಿಲಾಗಿ ನಾನು ಸುಂದರ ಮಕ್ಕಳನ್ನು ಹೊಂದಲು ಇಷ್ಟಪಡುತ್ತೇನೆ. ಅದರಲ್ಲೂ ಪ್ರಮುಖವಾಗಿ ನನಗೊಂದು ಸುಂದರ ಹೆಣ್ಣು ಮಗು ಬೇಕು. ಗಂಡು ಮಗು ಬೇಡ ಎಂದು ಹೇಳಿದ್ದಾರೆ.

ಒಟ್ಟಾರೆ ಈ ಬಾಲಿವುಡ್ ಸ್ಟಾರ್ಸ್‌ಗೆ ಮಕ್ಕಳೆಂದರೆ ಎಷ್ಟು ಪ್ರೀತಿ ಎಂಬುದು ತಿಳಿಯುತ್ತೆಯಾದರೂ ಈ ಇಬ್ಬರಲ್ಲಿ ಒಂದೇ ಒಂದು ಸಣ್ಣ ವ್ಯತ್ಯಾಸವಿದೆ. ನಟಿ ಬಿಪಾಶ ಬಸುಗೆ ಮದುವೆಯಾದ ಬಳಿಕ ಮಕ್ಕಳು ಬೇಕು ಎಂದರೆ, ನಟ ಸಲ್ಮಾನ್ ಖಾನ್‌ಗೆ ಮದುವೆ ಇಲ್ಲವೆಂದರೂ ಸರಿ ಮಕ್ಕಳು ಮಾತ್ರ ಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com