ಸಲ್ಮಾನ್ ಖಾನ್ ಪ್ರಕರಣ: ತೀರ್ಪು ಮೂಂದೂಡಿದ ನ್ಯಾಯಾಲಯ

ಕೃಷ್ಣಮೃಗ ಬೇಟೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಸಲ್ಮಾನ್ ಖಾನ್ ಅವರ ಪ್ರಕರಣದ ತೀರ್ಪನ್ನು ಜೋದ್‌ಪುರ ನ್ಯಾಯಾಲಯವು...
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on

ನವದೆಹಲಿ: ಕೃಷ್ಣಮೃಗ ಬೇಟೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಸಲ್ಮಾನ್ ಖಾನ್ ಅವರ ಪ್ರಕರಣದ ತೀರ್ಪನ್ನು ಜೋದ್‌ಪುರ ನ್ಯಾಯಾಲಯವು ಮಾರ್ಚ್ 3ಕ್ಕೆ ಮುಂದೂಡಿದೆ.  

ಸಲ್ಮಾನ್ ಖಾನ್ ಅವರ ಕೃಷ್ಣ ಮೃಗ ಬೇಟೆ ಪ್ರಕರಣದ ಭಾಗವಾಗಿದ್ದ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಜೋದ್‌ಪುರ ನ್ಯಾಯಾಲಯ ಇಂದು ತೀರ್ಪು ನೀಡುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯವು ಅಂತಿಮ ತೀರ್ಪನ್ನು ಮಾರ್ಚ್ 3ಕ್ಕೆ ಮುಂದೂಡಿದೆ.

ಈ ಹಿಂದೆ ಫೆ.5 ರಂದು ವಾದ ವಿವಾದಗಳನ್ನು ಆಲಿಸಿದ್ದ ಕೋರ್ಟ್ ಫೆ.25 ತೀರ್ಪು ನೀಡುವುದಾಗಿ ಪ್ರಕಟಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com