'ಬಾಹುಬಲಿ' ಒಂದು ಉತ್ತಮ ಚಿತ್ರ, ಇದನ್ನು ಮೀರಿಸುವುದು ಕಷ್ಟ: ಸಲ್ಲು

ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ 'ಬಾಹುಬಲಿ' ಚಿತ್ರದ ಬಗ್ಗೆ ಬಾಲಿವುಡ್ ನಟ ಸಲ್ಮಾಖ್ ಖಾನ್ ಪ್ರಶಂಸೆ ವ್ಯಕ್ತಪಡಿಸಿದ್ದು,
ಸಲ್ಮಾಖ್ ಖಾನ್
ಸಲ್ಮಾಖ್ ಖಾನ್
Updated on: 

ಮುಂಬೈ: ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ 'ಬಾಹುಬಲಿ' ಚಿತ್ರದ ಬಗ್ಗೆ ಬಾಲಿವುಡ್ ನಟ ಸಲ್ಮಾಖ್ ಖಾನ್ ಪ್ರಶಂಸೆ ವ್ಯಕ್ತಪಡಿಸಿದ್ದು, ಇದೊಂದು ಉತ್ತಮ ಚಿತ್ರ ಎಂದು ಗುರುವಾರ ಹೇಳಿದ್ದಾರೆ.

ಇಂದು ಚಿತ್ರ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಸೂಪರ್ ಸ್ಟಾರ್ ಸಲ್ಲು, 'ಬಾಹುಬಲಿ'ಗೆ ಸರಿಸಮಾನದ ಚಿತ್ರ ಮಾಡಿ ಎಂದು ಬಾಲಿವುಡ್ ದಿಗ್ಗಜರಿಗೆ ಸಲಹೆ ನೀಡಿದ್ದಾರೆ.

ಆದಾಗ್ಯೂ, ಬಾಹುಬಲಿ ಚಿತ್ರ ಮೀರಿಸುವುದು ಕಷ್ಟವೇ ಎಂದಿರುವ ಸಲ್ಮಾನ್ ಖಾನ್, 'ಬಾಹುಬಲಿ' ಬಾಕ್ಸ್ ಆಫೀಸ್ ಕೊಳೆಹೊಡೆದ ಪರಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಾಹುಬಲಿ ಚಿತ್ರದ ಗಳಿಕೆ ಕಂಡು ನನಗೆ ಭಯವಾಗಿತ್ತು. ಬಾಲಿವುಡ್ ಚಿತ್ರಗಳು ಈ ಹಂತಕ್ಕೆ ಬೆಳೆಯಬೇಕು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com