ಬಾಲ್ಡ್ ಬ್ಯೂಟಿ ಕಂಗನಾ

ಪಾತ್ರವೊಂದರ ನಿರ್ವಹಣೆಗಾಗಿ ಬೋಳುತಲೆಯಲ್ಲಿ ಕಾಣಿಸಿಕೊಳ್ಳುವುದು ಸುಲಭವಲ್ಲ. ಆದರೆ ವೃತ್ತಿಬದ್ಧತೆಯ ಕಾರಣಕ್ಕೆ ನಟರು ಆಗಾಗ...
ಕಂಗನಾ ರಾನಾವತ್
ಕಂಗನಾ ರಾನಾವತ್
Updated on

ಪಾತ್ರವೊಂದರ ನಿರ್ವಹಣೆಗಾಗಿ ಬೋಳುತಲೆಯಲ್ಲಿ ಕಾಣಿಸಿಕೊಳ್ಳುವುದು ಸುಲಭವಲ್ಲ. ಆದರೆ ವೃತ್ತಿಬದ್ಧತೆಯ ಕಾರಣಕ್ಕೆ ನಟರು ಆಗಾಗ ಇಂತಹ ರಿಸ್ಕ್ ತೆಗೆದುಕೊಳ್ಳುತ್ತಾರೆ. ತಾವು ನಟಿಸುವ ಪಾತ್ರದ ನಿರ್ವಹಣೆಗೆ ಎಷ್ಟು ಬದ್ಧರಾಗಿರುತ್ತಾರೆ ಎನ್ನುವುದು ಕಲಾವಿದರ ವೃತ್ತಿಬದುಕಿನ ನಿರ್ಣಾಯಕ ಅಂಶಗಳಲ್ಲಿ ಒಂದು.

ಬಾಲಿವುಡ್ ನಟರು ಭಿನ್ನ ನೋಟಗಳಲ್ಲಿ ಕಾಣಿಸಿಕೊಳ್ಳಲು ಎನೇನೋ ಕಸರತ್ತು ಮಾಡುವುದು ಹೊಸತಲ್ಲ. ಆದರೆ ಅಂತಹ ಪ್ರಯತ್ನಗಳು ತಮ್ಮನ್ನು ತೆರೆಯ ಮೇಲೆ ಇನ್ನಷ್ಟು ಸುಂದರವಾಗಿ ಕಾಣಿಸಬಲ್ಲದು ಎಂದರೆ ಮಾತ್ರ ಹೆಚ್ಚಿನ ಕಲಾವಿದರು ಒಪ್ಪಿಕೊಳ್ಳುತ್ತಾರೆ. ಅವು ತಮ್ಮನ್ನು ಇನ್ನಷ್ಟು ಕುರೂಪಗೊಳಿಸುತ್ತದೆ ಎಂಬುದರ ಅರಿವಿದ್ದೂ ಪಾತ್ರ ಪೋಷಣೆಗಾಗಿ ರಿಸ್ಕ್ ತೆಗೆದುಕೊಳ್ಳುವ ನಟರು ಕೆಲವೇ ಕೆಲವರು.

ಈ ಹಿಂದೆ ಹೈದರ್ ಚಿತ್ರದಲ್ಲಿ ಶಾಹೀದ್ ಕಪೂರ್ ತಲೆ ಬೋಳಿಸಿಕೊಂಡು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ ಕೂಡ ಮೇರಿಕೋಮ್ ಚಿತ್ರದ ದೃಶ್ಯವೊಂದರಲ್ಲಿ ಬೋಳುತಲೆಯಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿನ ಸಿನಿಮಾಗಳಲ್ಲಿ ಉತ್ತಮ ನಟನೆಯಿಂದಷ್ಟೇ ಅಲ್ಲದೇ ವಿಭಿನ್ನ ನೋಟಗಳಿಂದಲೂ ಗಮನ ಸೆಳೆದ ನಟಿ ಕಂಗನಾ. 'ಕಟ್ಟಿ ಬಟ್ಟಿ'ಯಲ್ಲಿ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸನ್ನಿವೇಶಕ್ಕಾಗಿ ಕಂಗನಾ ಕೃತಕ ಸಾಧನ ಬಳಸಿದ್ದಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com