ಸಲ್ಮಾನ್ ನಿರಾಕರಿಸಿದ ನಂತರ 'ಶುದ್ಧಿ'ಯಲ್ಲಿ ನಟಿಸಲೊಲ್ಲೆ ಎಂದ ಸಂಜಯ್ ದತ್ತ

ಕರಣ್ ಜೋಹರ್ ಅವರ 'ಶುದ್ಧಿ ' ಚಲನಚಿತ್ರದಲ್ಲಿ ಖಳನಾಯಕನ ಪಾತ್ರ ವಹಿಸಲು ಈ ಹಿಂದೆ ಸಲ್ಮಾನ್ ಖಾನ್ ನಿರಾಕರಿಸಿದ್ದರು. ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರುವ
ಸಂಜಯ್ ದತ್
ಸಂಜಯ್ ದತ್
Updated on

ಕರಣ್ ಜೋಹರ್ ಅವರ 'ಶುದ್ಧಿ ' ಚಲನಚಿತ್ರದಲ್ಲಿ ಖಳನಾಯಕನ ಪಾತ್ರ ವಹಿಸಲು ಈ ಹಿಂದೆ ಸಲ್ಮಾನ್ ಖಾನ್ ನಿರಾಕರಿಸಿದ್ದರು. ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರುವ ಸಂಜಯ್ ದತ್ ಕೂಡ ಈ ಪಾತ್ರ ನಿರ್ವಹಿಸಲು ನಿರಾಕರಿಸಿದ್ದಾರೆ.

ಸಂಜಯ್ ದತ್ ಮತ್ತು ಸಲ್ಮಾನ್ ಖಾನ್ ವಿಶೇಷವಾದ ಹತ್ತಿರ ಸಂಬಂಧ ಹೊಂದಿರುವ ವ್ಯಕ್ತಿಗಳು.

ಜಲಿನಿನಿಂದ ಹೊರಬಂದ ಮೇಲೆ ತಮಗೆ ಯಾವುದೇ ಋಣಾತ್ಮಕ ಪಾತ್ರದಲ್ಲಿ ನಟಿಸಲು ಇಷ್ಟವಿಲ್ಲ ಎಂದು ದಿನಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಸಂಜಯ್ ದತ್ ತಿಳಿಸಿದ್ದರು.

ಆ ವರದಿಯಲ್ಲಿ, ನಿರ್ದೇಶಕ ಉಮೇಶ್ ಶುಕ್ಲಾ ಅವರ ಒಎಂಜಿ-ಒಹ್ ಮೈ ಗಾಡ್ ಸಿನೆಮಾದಲ್ಲಿ ನಾಯಕನಟನಾಗಿ ನಟಿಸಲಿದ್ದಾರೆ ಎಂದು ಕೂಡ ತಿಳಿಸಿತ್ತು.

ಈ ವದಂತಿಗಳನ್ನು ನಿರಾಕರಿಸಿರುವ ಕರಣ್ ಜೋಹರ್ "ಶುದ್ಧಿಯಲ್ಲಿನ ಖಳನಾಯಕನ ಪಾತ್ರ ಇಲ್ಲಿಯವರೆಗೂ ಬರೆಯಲಾಗಿರುವ ಅತ್ಯುತ್ತಮ ಖಳನಾಯಕ ಪಾತ್ರದಲ್ಲೊಂದು. ನಾನು ಸಂಜಯ್ ಅವರನ್ನು ಎಂದಿಗೂ ಕೇಳಿಲ್ಲ. ಅದರ ಪಾತ್ರ ವರ್ಗದ ಶೋಧನೆ ಜಾರಿಯಲ್ಲಿದೆ" ಎಂದಿದ್ದರೆ.

೧೯೯೩ ಮುಂಬೈ ಸರಣಿ ಸ್ಫೋಟದ ಪ್ರಕರಣದಲ್ಲಿ ಸಂಜಯ್ ದತ್ ಅವರು ಪುಣೆಯ ಯೆರ್ವಾಡ ಜೈಲಿನಲ್ಲಿ ೪೨ ತಿಂಗಳ ಸಜೆಯಲ್ಲಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com