ಬಾಲಿವುಡ್ ಸಂಗೀತದ ದಂತಕಥೆ ಆರ್ ಡಿ ಬರ್ಮನ್
ಬಾಲಿವುಡ್
ಆರ್ ಡಿ ಬರ್ಮನ್ ಜನ್ಮದಿನಾಚರಣೆಗೆ ಪುಸ್ತಕ, ವಿಡಿಯೋ ಬಿಡುಗಡೆ
ಆರ್ ಡಿ ಬರ್ಮನ್ ಅವರ ೭೬ ನೇ ಜನ್ಮದಿನದ ನೆನಪಿಗೆ ನಿರ್ದೇಶಕ ಬ್ರಹ್ಮಾನಂದ ಎಸ್ ಸಿಂಗ್ ಅವರು ಬಾಲಿವುಡ್ ಸಂಗೀತದ ದಂತಕಥೆ ಬರ್ಮನ್ ಅವರ
ನವದೆಹಲಿ: ಆರ್ ಡಿ ಬರ್ಮನ್ ಅವರ ೭೬ ನೇ ಜನ್ಮದಿನದ ನೆನಪಿಗೆ ನಿರ್ದೇಶಕ ಬ್ರಹ್ಮಾನಂದ ಎಸ್ ಸಿಂಗ್ ಅವರು ಬಾಲಿವುಡ್ ಸಂಗೀತದ ದಂತಕಥೆ ಬರ್ಮನ್ ಅವರ ಸಂದರ್ಶನಗಳನ್ನೊಳಗೊಂಡ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆಯನ್ನು ಮುಂಚಿತವಾಗಿಯೇ ಮಂಗಳವಾರ ಮಾಡಲಿದ್ದಾರೆ.
ಆರ್ ಡಿ ಬರ್ಮನ್ ಅವರ ಜನ್ಮದಿನ ಜೂನ್ ೨೭ರಂದು.
'ಪಂಚಮ್ ಅನ್ ಮಿಕ್ಸ್ಡ್' ಸಿನೆಮಾ ಖ್ಯಾತಿಯ ಸಿಂಗ್ "ಡೈಮಂಡ್ಸ್ ಅಂಡ್ ರಸ್ಟ್' ಎಂಬ ವಿಡಿಯೋ ಮತ್ತು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
'ಹಮ್ ಕಿಸಿಸೆ ಕಂ ನಹಿ'. 'ಶೋಲೆ' ಮತ್ತು 'ಯಾದೋಂಕಿ ಬಾರತ್' ಇಂತಹ ಸಿನೆಮಾಗಳಿಗೆ ಸಂಗೀತ ನಿರ್ದೇಶಿಸಿ ಅಜರಾಮರರಾಗಿ ಜನರ ಮನಸ್ಸಿನಲ್ಲಿ ಉಳಿದಿರುವ ಬರ್ಮನ್ ೧೯೯೪ ಜನವರಿ ೪ ರಂದು ತಮ್ಮ ೫೪ ನೆ ವಯಸ್ಸಿನಲ್ಲಿ ಸಾವನ್ನಪ್ಪಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ