
ಮುಂಬೈ: ಮದುವೆಗೆ ವಯಸ್ಸಿನ ಮಿತಿ ಇಲ್ಲ. ನನಗೆ 28 ವರ್ಷಗಳಾಗಿದೆ ಎಂಬ ಕಾರಣಕ್ಕೆ ಮದುವೆಯಾಗಬೇಕು, ಮಕ್ಕಳಾಗಬೇಕು ಎಂಬುದೇನಿಲ್ಲ, ಪ್ರೀತಿ, ಮದುವೆ, ಮಕ್ಕಳೆಲ್ಲ ಆಗುವ ಸಮಯಕ್ಕೆ ಆಗುತ್ತವೆ ಅನ್ನೋದು ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕಂಗನಾ ರಾನತ್ ದಿಟ್ಟ ನುಡಿ.
ಈಗ ಬಾಲಿವುಡ್ ಅಂಗಳದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಹೆಸರು ಕಂಗನಾ. ''ತನು ವೆಡ್ಸ್ ಮನು ರಿಟರ್ನ್ಸ್" ಸಿನಿಮಾದ ಯಶಸ್ಸಿನಿಂದ ಕಂಗೊಳಿಸುತ್ತಿರುವ ಈ ಚೆಲುವೆಗೆ ಸದ್ಯಕ್ಕೆ ಮದುವೆಯಾಗಲು ಇಷ್ಟವಿಲ್ಲವಂತೆ.
ನಾನು ಕಳೆದ ಹತ್ತು ವರ್ಷಗಳಲ್ಲಿ ಕಷ್ಟಪಟ್ಟು ಬಾಲಿವುಡ್ ನಲ್ಲಿ ಒಂದು ಸ್ಥಾನ ಗಳಿಸಿದ್ದೇನೆ. ಈಗ ನನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ನನಗೆ ಸಾಧ್ಯವಿದೆ ಮತ್ತು ನನಗೆ ಉತ್ತಮ ಭವಿಷ್ಯವಿದೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾಳೆ.
ಮದುವೆ ಅನ್ನುವುದು ಜೀವನದ ಬದ್ಧತೆ. ಅದನ್ನು ಸದ್ಯಕ್ಕೆ ಸ್ವೀಕರಿಸಲು ಸಿದ್ದವಿಲ್ಲ. ಸಿನಿ ವೃತ್ತಿಯಲ್ಲಿ ನನ್ನ ಹೊಸ ಪಯಣ ಆರಂಭವಾಗಿದೆ ಎನ್ನುತ್ತಾಳೆ.
ಜೀವನದ ಒಂದು ಹಂತದಲ್ಲಿ ನೀವು ಯೋಗ್ಯರು ಎಂದು ಸಾಬೀತುಪಡಿಸುವುದಕ್ಕೆ ಹೋರಾಡಬೇಕಾಗುತ್ತದೆ. ಆ ಹೋರಾಟ ಕೆಲವು ವರ್ಷಗಳವರೆಗೆ ಮಾತ್ರ ಸಾಧ್ಯ. ನಂತರ ನಿಮ್ಮ ಜೀವನ ಅನ್ವೇಷಣೆಗೆ, ಎರಡನೇ ಹಂತಕ್ಕೆ ತಲುಪುತ್ತದೆ. ನಾನೀಗ ಜೀವನದ ಎರಡನೇ ಹಂತಕ್ಕೆ ತಲುಪಿದ್ದೇನೆ ಎಂದು ಅನುಭವಸ್ಥಳಂತೆ ಮಾತನಾಡುತ್ತಾಳೆ ಕಂಗನಾ.
Advertisement