
ಗ್ಲಾಮರ್ ಡಾಲ್ ಸಮಂತಾ ಸ್ಲಂ ಹುಡುಗಿ ಆಗುವುದೇ? ಹೌದು, ತಮಿಳಿನ ‘ಕಾಕ ಮುಟೈ’ ಖ್ಯಾತಿಯ ನಿರ್ದೇಶಕ ವಿಟ್ರಿಮಾರನ್ ಮುಂದಿನ ಚಿತ್ರದಲ್ಲಿ ಸಮಂತಾ ಸ್ಲಂ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ.
ಅಷ್ಟೇ ಅಲ್ಲ, ಈ ಚಿತ್ರಕ್ಕೆ ಈಕೆಯೇ ವಾಯ್ಸ್ ಡಬ್ಬ್ ಮಾಡುವುದು ಕೂಡ ಗ್ಯಾರಂಟಿಯಾಗಿದೆ ಎನ್ನುತ್ತಿದೆ ‘ವಡ ಚೆನ್ನೈ’ ಚಿತ್ರತಂಡದ ಮೂಲಗಳು. ಹೌದು, ‘ವಡ ಚೆನ್ನೈ’ ಹೆಸರಲ್ಲಿ ಸೆಟ್ಟೇರುತ್ತಿರುವ ಈ ಚಿತ್ರಕ್ಕೆ ಧನುಷ್ ನಾಯಕ ನಟ. ನಾಯಕಿಯಾಗಿ ಸಮಂತಾ ಅಭಿನಯಿಸುತ್ತಿದ್ದಾರೆ. ಸಮುದ್ರ ತೀರದದಲ್ಲಿ ಈ ಚಿತ್ರದ ಚಿತ್ರೀಕರಣಕ್ಕಾಗಿ ವಿಶೇಷವಾದ ಸೆಟ್ ಹಾಕಲಾಗುತ್ತಿದೆಯಂತೆ. ಈವರೆಗಿನ ಚಿತ್ರಗಳಲ್ಲಿ ಕಾಣಿಸಿಕೊಂಡ ಪಾತ್ರಗಳಿಗಿಂತ ತೀರಾ ವಿಭಿನ್ನವಾದ ಪಾತ್ರ ಮತ್ತು ಕಾಸ್ಟ್ಯೂಮ್‌ನಲ್ಲಿ ಸಮಂತಾ ಅವರು ಕಾಣಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.
Advertisement