ಚಿತ್ರೀಕರಣದ ವೇಳೆ ಪೆಟ್ಟು; ಸಂಪೂರ್ಣ ವಿಶ್ರಾಂತಿಗೆ ಅಮೀರ್ ಖಾನ್ ಗೆ ಸಲಹೆ

'ದಂಗಲ್' ಸಿನೆಮಾದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ಭುಜ ಉಳುಕಿ ಪೆಟ್ಟು ಮಾಡಿಕೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರಿಗೆ ಕನಿಷ್ಠ ೮
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್
Updated on

ಮುಂಬೈ: 'ದಂಗಲ್' ಸಿನೆಮಾದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ಭುಜ ಉಳುಕಿ ಪೆಟ್ಟು ಮಾಡಿಕೊಂಡಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರಿಗೆ ಕನಿಷ್ಠ ೮ ದಿನಗಳವರೆಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

ಕುಸ್ತಿ ದೃಶ್ಯವೊಂದರ ಚಿತ್ರೀಕರಣ ವೇಳೆಯಲ್ಲಿ ನವೆಂಬರ್ ೧೪ ರಂದು ಅಮೀರ್ ಖಾನ್ ಪೆಟ್ಟು ಮಾಡಿಕೊಂಡಿದ್ದರು. ಆದುದರಿಂದ ಈಗ ನಿತೇಶ್ ತಿವಾರಿ ಅವರ ಸಿನೆಮಾದಿಂದ ವಿರಾಮ ಪಡೆದು ವಿಶ್ರಾಂತಿಗೆ ಮುಂಬೈಗೆ ವಾಪಸಾಗಿದ್ದಾರೆ.

"ಪೆಟ್ಟಿನಿಂದ ಅಮೀರ್ ಲುಧಿಯಾನಾದಲ್ಲಿ ೨೪ ಘಂಟೆಗಳ ವಿಶ್ರಾಂತಿಯಲ್ಲಿದ್ದರು. ಅವರಿಗೆ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು  ಕನಿಷ್ಠ ೮ ದಿನಗಳವರೆಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ" ಎಂದು ಅಮೀರ್ ಅವರ ವಕ್ತಾರ ತಿಳಿಸಿದ್ದಾರೆ.

ಅಮೀರ್ ಖಾನ್ ಗುಣಮುಖ ಹೊಂದುವವರೆಗೂ ಸಾಕ್ಷಿ ತನ್ವಾರ್, ಫಾತಿಮಾ ಸನಾ ಶೇಕ್ ಮತ್ತು ರಾಜಕುಮಾರ್ ರಾವ್ ಇವರುಗಳನ್ನು ಒಳಗೊಂಡ ಚಿತ್ರ ತಂಡ ವಿರಾಮ ತೆಗೆದುಕೊಂಡಿದೆ. ದೀಪಾವಳಿ ಸಮಯವಾದ್ದರಿಂದ ಅಮೀರ್ ಅವರ ಪತ್ನಿ ಕಿರಣ್ ರಾವ್ ಮತ್ತು ಪುತ್ರ ಆಜಾದ್ ಕೂಡ ಲುಧಿಯಾನಾದಲ್ಲಿ ಜೊತೆಗಿದ್ದರು ಎಂದು ತಿಳಿದುಬಂದಿದೆ.

ಕುಸ್ತಿ ಪಟು ಮಹಾವೀರ್ ಫೋಗಟ್ ಅವರ ಜೀವನಾಧಾರಿತ ಸಿನೆಮಾ 'ದಂಗಲ್'. ಕ್ರಿಸ್ಮಸ್ ಹಬ್ಬಕ್ಕೆ ಈ ಸಿನೆಮಾ ಬಿಡುಗಡೆಯಾಗಬೇಕಿತ್ತು. ಇದೇ ನಟನ 'ತಾರೆ ಜಮೀನ್ ಪರ್'. '೩ ಇಡಿಯಟ್ಸ್', 'ಧೂಮ್ ೩' ಮತ್ತು 'ಪಿಕೆ' ಕ್ರಿಸ್ಮಸ್ ಹಬ್ಬಕ್ಕೆ ಬಿಡುಗಡೆಯಾಗಿ ಯಶಸ್ಸು ಕಂಡ ಚಿತ್ರಗಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com