ನವದೆಹಲಿ: 2008ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಕೈಮಾಡಿದ ಹಾಗೂ ಬೆದರಿಕೆಯೊಡ್ಡಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ಗೋವಿಂದ ಅವರಿಗೆ, ಸಂತ್ರಸ್ತನ ಕ್ಷಮೆ ಯಾಚಿಸುವಂತೆ ಸುಪ್ರೀಂ ಕೋರ್ಟ್ ಸಲಹೆ ಮಾಡಿದೆ.
`ನೀವೊಬ್ಬರು ದೊಡ್ಡ ಹೀರೋ, ನಿಮ್ಮ ಹೃದಯವಂತಿಕೆಯನ್ನು ತೋರಿಸಿ' ಎಂದು ನ್ಯಾ.ಟಿ.ಎಸ್.ಥಾಕುರ್ ಅವರಿದ್ದ ನ್ಯಾಯಪೀಠ ಹೇಳಿದೆ. ನಾವು ನಿಮ್ಮ ಸಿನೆಮಾ ನೋಡಿ ಸಂತೋಷಪಟ್ಟಿದ್ದೇವೆ. ಆದರೆ ಯಾರನ್ನಾದರೂ ಹೊಡೆಯುವುದು ಸಹಿಸಲಾಗದು ಎಂದಿದೆ.
2008ರಲ್ಲಿ ಚಿತ್ರೀಕರಣದ ಸೆಟ್‍ನಲ್ಲಿ ಸಂತೋಷ್ ರೈ ಎಂಬವರ ಮೇಲೆ ಹಲ್ಲೆ ಮಾಡಿದ ಹಾಗೂ ಬೆದರಿಕೆಯೊಡ್ಡಿದ ಆರೋಪವನ್ನು ಗೋವಿಂದ ಎದುರಿಸುತ್ತಿದ್ದಾರೆ. ಈ ಪ್ರಕರಣದ ವಿಡಿಯೋವನ್ನು ನ್ಯಾಯಪೀಠ ಮೊಬೈಲ್‍ನಲ್ಲಿ ವೀಕ್ಷಿಸಿದೆ.