ಕಿರುತೆರೆ ನಟಿ ಮೇಲೆ ಅತ್ಯಾಚಾರ: ಬಾಲಿವುಡ್ ನಟ ವಿಶಾಲ್ ಠಕ್ಕರ್ ಬಂಧನ

ಕಿರುತೆರೆ ನಟಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ವಿಶಾಲ್ ಠಕ್ಕರ್​ರನ್ನು ಚಾರ್ಕೋಪ್ ಪೊಲೀಸರು...
ವಿಶಾಲ್ ಠಕ್ಕರ್
ವಿಶಾಲ್ ಠಕ್ಕರ್

ಮುಂಬೈ: ಕಿರುತೆರೆ ನಟಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ವಿಶಾಲ್ ಠಕ್ಕರ್​ರನ್ನು ಚಾರ್ಕೋಪ್ ಪೊಲೀಸರು ಬಂಧಿಸಿದ್ದಾರೆ.

26 ವರ್ಷದ ಕಿರುತೆರೆ ನಟಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಅತ್ಯಾಚಾರ ಎಸಗಿರುವುದಾಗಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಿಸಿರುವ ಪೊಲೀಸರು ಆರೋಪಿಯನ್ನು ಅವರ ಮನೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ನಾವಿಬ್ಬರು ಕಳೆದ ಕೆಲವು ತಿಂಗಳುಗಳಿಂದ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದು, ಈ ವೇಳೆ ಆರೋಪಿ ನಟ ವಿಶಾಲ್ ಠಕ್ಕರ್ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೇ ಹಲವು ಬಾರಿ ಹಲ್ಲೆ ನಡೆಸಿ, ಎಲ್ಲರ ಎದುರು ನಿಂಧಿಸಿ ಅವಮಾನಿಸಿದ್ದಾರೆ ಎಂದು ನಟಿ ದೂರಿನಲ್ಲಿ ಹೇಳಿದ್ದಾರೆ.

ವಿಶಾಲ್ ಠಕ್ಕರ್ ಮುನ್ನ ಭಾಯಿ ಎಂಬಿಬಿಎಸ್, ಟ್ಯಾಂಗೋ ಚಾರ್ಲಿ, ಚಾಂದಿನಿ ಬಾರ್ ಚಿತ್ರಗಳಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದು, ಕಿರುತೆರೆಯ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com