ಹೃತಿಕ್ ಸ್ನೇಹಿತನೊಂದಿಗೆ ಸೂಸಾನ್ ಖಾನ್ ಮದುವೆ?

ಬಾಲಿವುಡ್ ನಟ ಹೃತಿಕ್ ರೋಷನ್ ಅವರಿಗೆ ವಿಚ್ಛೇದನ ನೀಡಿದ ಬಳಿಕ ಒಂಟಿಯಾಗಿರುವ ಸೂಸಾನ್ ಖಾನ್ ಅವರು...
ಅರ್ಜುನ್ ರಾಂಪಾಲ್- ಸೂಸಾನ್ ಖಾನ್- ಹೃತಿಕ್ ರೋಷನ್
ಅರ್ಜುನ್ ರಾಂಪಾಲ್- ಸೂಸಾನ್ ಖಾನ್- ಹೃತಿಕ್ ರೋಷನ್

ಬಾಲಿವುಡ್ ನಟ ಹೃತಿಕ್ ರೋಷನ್ ಅವರಿಗೆ ವಿಚ್ಛೇದನ ನೀಡಿದ ಬಳಿಕ ಒಂಟಿಯಾಗಿರುವ ಸೂಸಾನ್ ಖಾನ್ ಅವರು ಈಗ ಎರಡನೇ ಮದುವೆಯಾಗುವ ಯೋಚನೆಯಲ್ಲಿದ್ದಾರಂತೆ.

ಹೃತಿಕ್ ರೋಷನ್ ಹಾಗೂ ಸೂಸಾನ್ ಅವರ 14 ವರ್ಷಗಳ ದಾಂಪತ್ಯ ಜೀವನ ಮುರಿದು ಬೀಳಲು, ಹೃತಿಕ್ ಅವರ ಆಪ್ತ ಸ್ನೇಹಿತ ಅರ್ಜುನ್ ರಾಮ್‌ಪಾಲ್ ಅವರು ಕಾರಣ ಎಂಬ ವದಂತಿ ಇತ್ತು. ಇದೀಗ ಆ ವದಂತಿ ನಿಜವಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಇತ್ತೀಚಿನ ಮಾಧ್ಯಮಗಳ ವರದಿಯ ಪ್ರಕಾರ, ಸೂಸಾನ್ ಅವರು ಹಳೆಯದನ್ನೆಲ್ಲಾ ಮರೆತು ಮಾಜಿ ಪತಿಯ ಆಪ್ತ ಅರ್ಜುನ್ ರಾಮ್‌ಪಾಲ್ ಅವರೊಂದಿಗೆ ಮರು ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

2013ರಲ್ಲಿ ವಿಚ್ಛೇದನದ ಬಗ್ಗೆ ಹೃತಿಕ್ ಹಾಗೂ ಸೂಸಾನ್ ಇಬ್ಬರೂ ಮಾಧ್ಯಮಗಳಿಗೆ ಪ್ರತ್ಯೇಕ ಹೇಳಿಕೆಗಳನ್ನು ನೀಡಿದ್ದರು. ವೈಯಕ್ತಿಕ ಕಾರಣಗಳಿಂದ ಬೇರೆಯಾಗುತ್ತಿದ್ದೇವೆ ಎಂದು ಹೃತಿಕ್ ಹೇಳಿದ್ದರು. ಇನ್ನು ಇಬ್ಬರಿಗೂ ಪರಸ್ಪರ ಗೌರವ, ವಿಶ್ವಾಸ ಇದ್ದು, ವೈಯಕ್ತಿಕ ಕಾರಣಗಳಿಂದ ಬೇರೆ ಆಗುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಸೂಸಾನ್ ಹೇಳಿದ್ದರು.

ಡಿಸೆಂಬರ್ 20, 2000ದಲ್ಲಿ ಮದುವೆಯಾಗಿದ್ದ ಹೃತಿಕ್ ಹಾಗೂ ಸೂಸಾನ್ ಗೆ ರೆಹಾನ್‌ ಮತ್ತು ರಿದಾನ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಇಷ್ಟ ಪಟ್ಟವರು ತಮಗಿಷ್ಟವಾದ ಸಮಯದಲ್ಲಿ ಮಕ್ಕಳ ಜೊತೆ ಇರಬಹುದಾಗಿದೆ ಎಂದು ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com