ನಾನು ಪೂರ್ಣಾವಧಿ ಹೋರಾಟಗಾರ್ತಿ: ನೇಹಾ ಧೂಪಿಯಾ

'ಜೂಲಿ', 'ಕ್ಯಾ ಕೂಲ್ ಹೈ ಹಮ್', 'ಡೆಲ್ಲಿ ಡಿಲೈಟ್ಸ್' ಮತ್ತು 'ಫಸ್ ಗಯೇ ರೆ ಒಬಾಮಾ' ಈ ಸಿನೆಮಾಗಳ ನಟನೆಗೆಗಾಗಿ ನೆನಪಾಗುವ ಬಾಲಿವುಡ್ ನಟಿ, ಮಾಜಿ ಮಿಸ್ ಇಂಡಿಯಾ ನೇಹಾ ಧೂಪಿಯಾ
ಬಾಲಿವುಡ್ ನಟಿ, ಮಾಜಿ ಮಿಸ್ ಇಂಡಿಯಾ ನೇಹಾ ಧೂಪಿಯಾ
ಬಾಲಿವುಡ್ ನಟಿ, ಮಾಜಿ ಮಿಸ್ ಇಂಡಿಯಾ ನೇಹಾ ಧೂಪಿಯಾ
Updated on

ಮುಂಬೈ: 'ಜೂಲಿ', 'ಕ್ಯಾ ಕೂಲ್ ಹೈ ಹಮ್', 'ಡೆಲ್ಲಿ ಡಿಲೈಟ್ಸ್' ಮತ್ತು 'ಫಸ್ ಗಯೇ ರೆ ಒಬಾಮಾ' ಈ ಸಿನೆಮಾಗಳ ನಟನೆಗೆಗಾಗಿ ನೆನಪಾಗುವ ಬಾಲಿವುಡ್ ನಟಿ, ಮಾಜಿ ಮಿಸ್ ಇಂಡಿಯಾ ನೇಹಾ ಧೂಪಿಯಾ ತಮ್ಮನ್ನು ಪೂರ್ಣಾವಧಿ ಹೋರಾಟಗಾರ್ತಿ ಎಂದು ಕರೆದುಕೊಂಡಿದ್ದಾರೆ.

ತಾವು ಮಾಡಿರುವ ಸಿನೆಮಾಗಳ ಬಗ್ಗೆ ತೃಪ್ತಿ ಇದೆಯೇ ಎಂಬ ಪ್ರಶ್ನೆಗೆ ಧನಾತ್ಮಕವಾಗಿ ಉತರಿಸುತ್ತಾರೆ.

"ನಾನು ಯಾವುದನ್ನೂ ವಿಷಾದಿಸುವ ವ್ಯಕ್ತಿಯಲ್ಲ. ನಾನು ಇಲ್ಲಿಯವರೆಗೂ ಮಾಡಿರುವುದರ ಬಗ್ಗೆ ಹೆಮ್ಮೆಯಿದೆ. ನಿಮ್ಮಲ್ಲಿ ಹೋರಾಟ ಸತ್ತುಹೋದರೆ ಇನ್ನೇನು ಉಳಿಯುತ್ತದೆ? ಎಲ್ಲರೂ ಹೋರಾಟ ಮಾಡುತ್ತಾರೆ ನಾನು ಪೂರ್ಣಾವಧಿ ಹೋರಾಟಗಾರ್ತಿ" ಎನ್ನುತ್ತಾರೆ ನೇಹಾ.

"... ನನ್ನ ಕಡೆ ಬಂದ ಸ್ಕ್ರಿಪ್ಟ್ ಗಳನ್ನು ಕೇಳಿಸಿಕೊಂಡು ನನಗೆ ಖುಷಿಯಾಗಲಿಲ್ಲ ಅದಕ್ಕೆ ಅವುಗಳಲ್ಲಿ ನಟಿಸಲಿಲ್ಲ. ನನಗೆ ಇಷ್ಟವಾಗುವ ಯೋಜನೆಗಳಲ್ಲಷ್ಟೇ ನಾನು ನಟಿಸುತ್ತೇನೆ. ನಾನು ಜೀವನದಲ್ಲಿ ಬ್ಯುಸಿಯಾಗಿದ್ದೇನೆ" ಎಂದು 'ಎಂ ಟಿ ವಿ ರೋಡಿಸ್ ಎಕ್ಸ್-೪' ರಿಯಾಲಿಟಿ ಕಾರ್ಯಕ್ರಮದ ತೀರ್ಪುಗಾರ್ತಿಯಾಗಿ ಕಾಣಿಸ್ಕೊಳ್ಳುತ್ತಿರುವ ನಟಿ ನೇಹಾ ತಿಳಿಸಿದ್ದಾರೆ.

ಅಲ್ಲದೆ ಬಾಲಿವುಡ್ ಸಿನೆಮಾ 'ಸಂತಾ ಬಂತಾ ಪ್ರೈ ಲಿ" ಚಿತ್ರದಲ್ಲೂ ನಟಿಸಿದ್ದು ಮಾರ್ಚ್ ೧೧ ಕ್ಕೆ ಬಿಡುಗಡೆಯಾಗಲಿದೆಯಂತೆ. ಅಕ್ಷದೀಪ್ ಸಾಗರ್ ನಿರ್ದೇಶಿಸಿರುವ ಈ ಸಿನೆಮಾ ಹಾಸ್ಯ ಚಿತ್ರವಾಗಿದ್ದು ಬೊಮ್ಮನ್ ಇರಾನಿ ಮತ್ತು ವೀರ್ ದಾಸ್ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com