ದೊಡ್ಡ ದೊಡ್ಡ ನಟರುಗಳ ಜೊತೆ ಅಭಿನಯಿಸುವ ಆಸೆ : ಸನ್ನಿ ಲಿಯೋನ್

ರಾಯಿಸ್ ಸಿನಿಮಾದಲ್ಲಿ ಬಾದ್ ಶಾ ಶಾರೂಖ್ ಜತೆಗೆ ನಟಿಸಿ ಖುಷಿಯಾಗಿರುವ ನಟಿ ಸನ್ನಿ ಲಿಯೋನ್ ಗೆ ಟಾಪ್ ಸ್ಟಾರ್‌ಗಳ ಜತೆ ನಟಿಸುವ ಆಸೆಯಂತೆ. ...
ಶಾರೂಖ್ ಖಾನ್ ಮತ್ತು  ಸನ್ನಿ ಲಿಯೋನ್
ಶಾರೂಖ್ ಖಾನ್ ಮತ್ತು ಸನ್ನಿ ಲಿಯೋನ್

ಮುಂಬೈ: ರಾಯಿಸ್ ಸಿನಿಮಾದಲ್ಲಿ ಬಾದ್ ಶಾ ಶಾರೂಖ್ ಜತೆಗೆ ನಟಿಸಿ ಖುಷಿಯಾಗಿರುವ ನಟಿ ಸನ್ನಿ ಲಿಯೋನ್ ಗೆ  ಟಾಪ್ ಸ್ಟಾರ್‌ಗಳ ಜತೆ ನಟಿಸುವ ಆಸೆಯಂತೆ.

ಡಿಫರೆಂಟ್ ಸ್ಟಾರ್‌ಗಳ ಜತೆ ನಟಿಸುವುದು ನನಗೆ ಇಷ್ಟ. ಅದು ಶಾರೂಖ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮೀರ್ ಖಾನ್ ಆಗಿರಬಹುದು.

ಶಾರೂಖ್ ಖಾನ್ ಜತೆ ನಟಿಸಿದ್ದು ವಿಭಿನ್ನ ಅನುಭವ ನೀಡಿದೆ. ಇದರಿಂದ ನಾನು ತುಂಬಾ ಸಂತೋಷವಾಗಿದ್ದೇನೆ' ನನಗೆ ಒಂದು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ನನ್ನ ಪತಿ, ಹಾಗೂ ನಾನು ಎಷ್ಟು ಧನ್ಯವಾದ ತಿಳಿಸಿದ್ರು ಸಾಲದು 'ಎಂದಿದ್ದಾಳೆ ಸನ್ನಿ ಲಿಯೋನ್.

34 ವರ್ಷದ ಸನ್ನಿ ಲಿಯೋನ್, ಕಿಂಗ್ ಖಾನ್ ಜತೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ನ ಕಿಂಗ್ ಖಾನ್ ಶಾರೂಖ್ ಖಾನ್ ಅಭಿನಯದ ಮುಂಬರುವ ಚಿತ್ರ ರಾಯಿಸ್ ಚಿತ್ರದ ಲೈಲಾ ಓ ಲೈಲಾ ಹಾಡಿಗೆ ಸ್ಟೆಪ್ ಹಾಕಿದ್ದಾಳೆ ಸನ್ನಿ.

ಶಾರೂಖ್ ಖಾನ್ ಜೊತೆಗಿನ ನಟನೆ ನನಗೆ ತುಂಬಾ ಸಂತೋಷ ನೀಡಿದೆ. ಶಾರೂಖ್ ಮತ್ತು ನನ್ನನ್ನು ಒಂದೇ ಪ್ರೇಮ್ ನಲ್ಲಿ ನೋಡುವುದಕ್ಕೆ ಖುಷಿಯಾಗುತ್ತದೆ. ಅವರ ಜೊತೆ ಅಭಿನಯಿಸುವಾಗ ನಾನು ತುಂಬಾ ಕಾತುರದಿಂದ ಕಾಯುತ್ತಿದ್ದೆ ಹಾಗಯೇ ಒಂದು ಕಡೆ ಭಯ ಕೂಡ ಆಗುತ್ತಿತ್ತು ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com