ಈ ಕನ್ನಡತಿ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ

ಬಾಲಿವುಡ್ ನ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದಾಕ್ಷಣ ನೆನಪಿಗೆ ಬರುವುದು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಆದರೆ ಇದೀಗ ಆಕೆಯ ಪಟ್ಟ ಕಳಚಿ ಬಿದ್ದಿದೆ...
ದೀಪಿಕ ಪಡುಕೋಣೆ
ದೀಪಿಕ ಪಡುಕೋಣೆ

ಬಾಲಿವುಡ್ ನ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದಾಕ್ಷಣ ನೆನಪಿಗೆ ಬರುವುದು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಆದರೆ ಇದೀಗ ಆಕೆಯ ಪಟ್ಟ ಕಳಚಿ ಬಿದ್ದಿದೆ.

ಹೌದು ಸದ್ಯ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿಗೆ ಕನ್ನಡತಿ ದೀಪಿಕ ಪಡುಕೋಣೆ ಪಾತ್ರವಾಗಿದ್ದಾರೆ. ದೀಪಿಕ ನಟಿಸುತ್ತಿರುವ ಪದ್ಮಾವತಿ ಚಿತ್ರಕ್ಕಾಗಿ 12.65 ಕೋಟಿ ಸಂಭಾವನೆ ಪಡೆಯುವ ಮೂಲಕ ಕಂಗನಾರನ್ನು ಹಿಂದಿಕ್ಕಿದ್ದಾರೆ.

ಅದ್ದೂರಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಪದ್ಮಾವತಿ ಚಿತ್ರದಲ್ಲಿ ದೀಪಿಕ ಪಡುಕೋಣೆ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಬರೋಬ್ಬರಿ 12.65 ಕೋಟಿ ಪಡೆಯಲಿದ್ದಾರೆ. ಚಿತ್ರದಲ್ಲಿ ಮತ್ತೆ ರಣವೀರ್ ಸಿಂಗ್ ಮತ್ತು ದೀಪಿಕ ಒಂದಾಗಲಿದ್ದಾರೆ. ಈ ಜೋಡಿ ಈ ಹಿಂದೆ ರಾಮ್ ಲೀಲಾ ಮತ್ತು ಭಾಜಿರಾವ್ ಮಸ್ತಾನಿ ಚಿತ್ರದ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದವು.

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದ ದೀಪಿಕ ಅಲ್ಲಿ ವಿನ್ ಡೀಸೆಲ್ ನಟನೆಯ ತ್ರಿಬಲ್ ಎಕ್ಸ್: ದಿ ರಿಟರ್ನ್ ಆಫ್ ಝೇಂಡರ್ ಕೇಜ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ ತಮ್ಮ ಸಂಭಾವನೆಯನ್ನು ಹೆಚ್ಚಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com