ಬಿಗ್ ಬಿ ನಟನೆಯನ್ನು ಮೋಹಿಸುತ್ತಾರೆ: ರಾಮ್ ಗೋಪಾಲ್ ವರ್ಮಾ

ಅಮಿತಾಬ್ ಬಚ್ಚನ್ ಜೊತೆಗೆ 'ಸರ್ಕಾರ್' ಸಿನೆಮಾದ ಮೂರನೇ ಭಾಗ ಮಾಡಲು ಅಣಿಯಾಗುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕೆಲವು ಅದ್ಭುತ ನಟರು ನಟನೆಯನ್ನು ಪ್ರೀತಿಸುತ್ತಾರೆ
ರಾಮ್ ಗೋಪಾಲ್ ವರ್ಮಾ-ಅಮಿತಾಬ್ ಬಚ್ಚನ್
ರಾಮ್ ಗೋಪಾಲ್ ವರ್ಮಾ-ಅಮಿತಾಬ್ ಬಚ್ಚನ್
ನವದೆಹಲಿ: ಅಮಿತಾಬ್ ಬಚ್ಚನ್ ಜೊತೆಗೆ 'ಸರ್ಕಾರ್' ಸಿನೆಮಾದ ಮೂರನೇ ಭಾಗ ಮಾಡಲು ಅಣಿಯಾಗುತ್ತಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕೆಲವು ಅದ್ಭುತ ನಟರು ನಟನೆಯನ್ನು ಪ್ರೀತಿಸುತ್ತಾರೆ ಆದರೆ ಬಾಲಿವುಡ್ ನ ಶೇಹೆಂಶಃ ನಟನೆಯನ್ನು ಮೋಹಿಸುತ್ತಾರೆ ಎಂದಿದ್ದಾರೆ. 
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಟ್ವೀಟ್ ಮಾಡಿರುವ ಆರ್ ಜಿ ವಿ "ಕೆಲವು ಅದ್ಭುತ ನಟರು ನಟನೆಯನ್ನು ಪ್ರೀತಿಸುತ್ತಾರೆ ಆದರೆ ಅಮಿತಾಬ್ ಬಚ್ಚನ್ ನಟನೆಯನ್ನು ಮೋಹಿಸುತ್ತಾರೆ... ಅದಕ್ಕೆ ಅವರು ಅದ್ಭುತರಲ್ಲಿ ಅದ್ಭುತ ನಟ. ಪ್ರೀತಿಸುವುದನ್ನು ನಕಲು ಮಾಡಬಹುದು ಆದರೆ ಮೋಹವನ್ನು ನಕಲು ಮಾಡಲು ಸಾಧ್ಯವಿಲ್ಲ" ಎಂದು ಬರೆದಿದ್ದಾರೆ. 
ಹಾಗೆಯೇ ಬಿಗ್ ಬಿ ಮೇಲೆ ಪ್ರಶಂಸೆಯ ಸುರಿಮಳೆಗೆರೆದಿರುವ ಆರ್ ಜಿ ವಿ "ನಿರ್ದೇಶಕನಾಗುವ ಕನಸು ಕಾಣುತ್ತಿರುವ ಯುವಕರು ತಮ್ಮ ಹಣ ಮತ್ತು ಸಮಯವನ್ನು ಪುಣೆಯಲ್ಲಿ (ಎಫ್ ಟಿ ಐ ಐ) ಪೋಲು ಮಾಡುವ ಬದಲು ಅಮಿತಾಬ್ ಬಚ್ಚನ್ ಅವರ ಗ್ರಾಫ್ ಅಧ್ಯಯನ ಮಾಡಿದರೆ ಸಾಕು" ಎಂದಿದ್ದಾರೆ. 
"ವೃತ್ತಿಜೀವನದಲ್ಲಿ ಸುದೀರ್ಘ ಮತ್ತು ಪ್ರದರ್ಶನಗಳಲ್ಲಿ ಕಠಿಣ ಪರಿಶ್ರಮ.. ಅದಕ್ಕೆ ಅವರು ಸೀನಿಯರ್ ಬಚ್ಚನ್" ಎಂದು ಕೂಡ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com