ಕರೀನಾ ಕಪೂರ್ ಗೆ ಗಂಡು ಮಗು: ಹೆಸರು ತೈಮುರ್ ಆಲಿ ಖಾನ್ ಪಟೌಡಿ

ಬಾಲಿವುಡ್ ಬೇಗಂ ಕರೀನಾ ಕಪೂರ್ ತಾಯಿಯಾಗಿದ್ದಾರೆ. ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ...
ಸೈಫ್ ಆಲಿ ಖಾನ್-ಕರೀನಾ ಕಪೂರ್
ಸೈಫ್ ಆಲಿ ಖಾನ್-ಕರೀನಾ ಕಪೂರ್
Updated on
ಕರೀನಾ ಕಪೂರ್ ಗೆ ಗಂಡು ಮಗು: ಹೆಸರು ತೈಮುರ್ ಆಲಿ ಖಾನ್ ಪಟೌಡಿ 
ಬಾಲಿವುಡ್ ಬೇಗಂ ಕರೀನಾ ಕಪೂರ್ ತಾಯಿಯಾಗಿದ್ದಾರೆ. ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 
ತಮಗೆ ಮಗುವಾದ ಸಂತಸದಲ್ಲಿ ಸ್ವತಃ  ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ''ನಾವಿಬ್ಬರೂ ನಿಮ್ಮ ಜೊತೆ ಒಂದು ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇವೆ. ಅದೇನೆಂದರೆ ನಮ್ಮ ಪುತ್ರ ತೈಮುರ್ ಆಲಿ ಖಾನ್ ಪಟೌಡಿಯ ಜನನ. ಕಳೆದ 9 ತಿಂಗಳಲ್ಲಿ ನಮಗೆ ಬೆಂಬಲ ನೀಡಿದ ಮತ್ತು ನಮ್ಮನ್ನು ಅರ್ಥ ಮಾಡಿಕೊಂಡ ಮಾಧ್ಯಮದವರಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ಧನ್ಯವಾದಗಳು, ಎಲ್ಲರಿಗೂ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಶುಭಾಶಯಗಳು, ಪ್ರೀತಿಯಿಂದ ನಿಮ್ಮ ಸೈಫ್ ಮತ್ತು ಕರೀನಾ'' ಎಂದು ಹೇಳಿಕೆಯಲ್ಲಿ ತಾರಾ ದಂಪತಿ ತಿಳಿಸಿದ್ದಾರೆ.
ಸೈಫ್ ಮತ್ತು ಕರೀನಾಗೆ ಇದು ಮೊದಲ ಮಗು. ಸೈಫ್ ಆಲಿಖಾನ್ ಈಗಾಗಲೇ ಸಾರಾ ಮತ್ತು ಇಬ್ರಾಹಿಂ ಎಂಬ ಇಬ್ಬರು ಮಕ್ಕಳಿಗೆ ಮೊದಲ ಪತ್ನಿ ಅಮೃತಾ ಸಿಂಗ್ ರಿಂದ ತಂದೆಯಾಗಿದ್ದಾರೆ.
ಬಾಲಿವುಡ್ ನಿರ್ದೇಶಕ ಮತ್ತು ಕರೀನಾ ಅವರ ಸ್ನೇಹಿತ ಕರಣ್ ಜೋಹರ್ ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನೂ ಅನೇಕರು ಶುಭಾಶಯ ಕಳುಹಿಸುತ್ತಲೇ ಇದ್ದಾರೆ.
ಬಾಲಿವುಡ್ ನಲ್ಲಿ ನಟಿಯಾಗಿ ತನ್ನ ಛಾಪು ಮೂಡಿಸಿದ್ದ ಕರೀನಾ ಗರ್ಭಿಣಿಯಾದ ಬಳಿಕವೂ ಕೆಲಸಗಳಿಗೆ ವಿರಾಮ ಹೇಳಿರಲಿಲ್ಲ. ರ್ಯಾಂಪ್ ಮೇಲೆ ನಡಿಗೆ, ಫೋಟೋ ಶೂಟ್, ಮ್ಯಾಗಜಿನ್ ಮುಖಪುಟಕ್ಕೆ ಫೋಸ್ ಕೊಟ್ಟು ಎಲ್ಲರ ಗಮನ ಸೆಳೆದಿದ್ದರು. ಹೆರಿಗೆಯ ಅಂತಿಮ ದಿನಗಳವರೆಗೂ ಚಟುವಟಿಕೆ, ಲವಲವಿಕೆಯಿಂದ ಓಡಾಡುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com