'ಫ್ಯಾನ್' ಟ್ರೇಲರ್ ನೋಡಿ ಶಾರುಕ್ ಅಭಿಮಾನಿಯಾದ ಸಲ್ಮಾನ್

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರ ಬಹುನಿರೀಕ್ಷಿತ 'ಫ್ಯಾನ್' ಚಲನಚಿತ್ರದ ಟ್ರೇಲರ್ ವೀಕ್ಷಿಸಿ 'ದಬಾಂಗ್' ನಟ, ಕಿಂಗ್ ಖಾನ್ ಅವರ ಅಭಿಮಾನಿ
'ಫ್ಯಾನ್' ಸಿನೆಮಾದ ಸ್ಟಿಲ್
'ಫ್ಯಾನ್' ಸಿನೆಮಾದ ಸ್ಟಿಲ್

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರ ಬಹುನಿರೀಕ್ಷಿತ 'ಫ್ಯಾನ್' ಚಲನಚಿತ್ರದ ಟ್ರೇಲರ್ ವೀಕ್ಷಿಸಿ 'ದಬಾಂಗ್' ನಟ, ಕಿಂಗ್ ಖಾನ್ ಅವರ ಅಭಿಮಾನಿ ಬಳಗವನ್ನು ಸೇರಿದ್ದಾರಂತೆ.

'ಫ್ಯಾನ್' ಟ್ರೇಲರ್ ನ ಲಿಂಕ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಟ ಸಲ್ಮಾನ್ ಖಾನ್ "@ಬಿಯಿಂಗ್ ಸಲ್ಮಾನ್ ಖಾನ್ ಈಗ @ಐ ಆಮ್ ಎಸ್ ಆರ್ ಕೆ ಅಭಿಮಾನಿ" ಎಂದು ಟ್ವೀಟ್ ಮಾಡಿದ್ದಾರೆ.

ಮನೀಶ್ ಶರ್ಮಾ ನಿರ್ದೇಶನದ ಈ ಚಿತ್ರ ಏಪ್ರಿಲ್ ೧೫ ಕ್ಕೆ ತೆರೆ ಕಾಣಲಿದ್ದು, ನೆನ್ನೆ ಬಿಡುಗಡೆಯಾದ ಟ್ರೇಲರ್ ೧೦ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

ನೀವೂ ಒಮ್ಮೆ ಟ್ರೇಲರ್ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com