ಅದೃಷ್ಟವಶಾತ್ ನಾನಿನ್ನು ೫೦ ವರ್ಷದವನಲ್ಲ: ಹುಟ್ಟುಹಬ್ಬದ ದಿನ ಎ ಆರ್ ರಹಮಾನ್

ನಾನಿನ್ನೂ ವಯಸ್ಸಿನಲ್ಲಿ ಅರ್ಧ ಶತಕ ಬಾರಿಸದೇ ಇರುವುದಕ್ಕೆ ಅದೃಷ್ಟವಂತ ಎಂದೆನಿಸುತ್ತಿದೆ ಎಂದು ೪೯ನೆ ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ ಆರ್ ರಹಮಾನ್
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ ಆರ್ ರಹಮಾನ್
ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ ಆರ್ ರಹಮಾನ್
Updated on

ಚೆನ್ನೈ: ನಾನಿನ್ನೂ ವಯಸ್ಸಿನಲ್ಲಿ ಅರ್ಧ ಶತಕ ಬಾರಿಸದೇ ಇರುವುದಕ್ಕೆ ಅದೃಷ್ಟವಂತ ಎಂದೆನಿಸುತ್ತಿದೆ ಎಂದು ೪೯ನೆ ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಹೇಳಿದ್ದು, ಶುಭಾಶಯ ಕೋರಿದ, ಪ್ರಾಥಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

ಅಂತರಾಷ್ಟ್ರೀಯ ಖ್ಯಾತಿಯ ಸಂಗೀತ ನಿರ್ದೇಶಕ ಹುಟ್ಟುಹಬ್ಬದ ದಿನ ಫೇಸ್ಬುಕ್ ನಲ್ಲಿ ಹೀಗೆ ಹೇಳಿದ್ದಾರೆ.

"ನನ್ನ ನೆಚ್ಚಿನ ಗೆಳೆಯರಿಗೆ, ಅಭಿಮಾನಿಗಳಿಗೆ, ಕುಟುಂಬ ವರ್ಗಕ್ಕೆ ಮತ್ತು ಹಿತೈಷಿಗಳಿಗೆ... ನನ್ನ ಹುಟುಹಬ್ಬಕ್ಕೆ ನೀವು ಕೋರಿದ ಶುಭಾಶಯ, ಮಾಡಿದ ಪ್ರಾಥನೆ ಮತ್ತು ತೋರಿದ ಪ್ರೀತಿಗೆ ಧನ್ಯವಾದಗಳು. ನಾನು ಇನ್ನೂ ಶ್ರಮ ವಹಿಸಿ ಕೆಲಸ ಮಾಡಲು ಹಾಗು ಇನ್ನೂ ಸುಂದರ ಸಂಗೀತ ನಿಡಲು ನೀವುಗಳೆ ಸ್ಫೂರ್ತಿ. ಅದೃಷ್ಟವಶಾತ್ ನಾನಿನ್ನು ೫೦ ವರ್ಷ ತುಂಬಿಲ್ಲ" ಎಂದು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದು ಇದನ್ನು ಲಕ್ಷಾಂತರ ಜನ ಮೆಚ್ಚಿ ಲೈಕ್ ಮಾಡಿದ್ದಾರೆ.

"ದೇವರು ನಮ್ಮನ್ನೆಲ್ಲ ಒಗ್ಗೂಡಿಸಲಿ, ನಮ್ಮ ಹೃದಯಗಳನ್ನು ನಿರ್ಮಲವಾಗಿ ಹಾಗೂ ಸಹನೂಭೂತಿಯಿಂದ ಕೂಡಿರುವಂತೆ ಮಾಡಲಿ. ವಿಶ್ವವನ್ನು ವಿವೇಕ, ಪ್ರೀತಿ ಮತ್ತು ಕಾಳಜಿಯಿಂದ ಕೂಡಿರುವ ಸುಂದರ ಪ್ರದೇಶವನ್ನಾಗಿ ಮಾಡಲು ಪ್ರಯತ್ನಿಸೋಣ" ಎಂದು ಕೂಡ ಅವರು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com