ಹೃತಿಕ್ ರೋಷನ್
ಬಾಲಿವುಡ್
ಹೃತಿಕ್ ಹುಟ್ಟುಹಬ್ಬದಂದು ಮಧ್ಯರಾತ್ರಿ ವರೆಗೆ ಹಾಡು ಕುಣಿತ: ರು. 25 ಸಾವಿರ ದಂಡ
ಬಾಲಿವುಡ್ ನಟ ಹೃತಿಕ್ ರೋಷನ್ ಹುಟ್ಟುಹಬ್ಬದಂದು ಮಧ್ಯರಾತ್ರಿ ವರೆಗೆ ಹಾಡು ಕುಣಿತ ಏರ್ಪಡಿಸಿದ್ದರಿಂದ ರು. 25 ಸಾವಿರ ದಂಡ ವಿಧಿಸಲಾಗಿದೆ....
ಬಾಲಿವುಡ್ ನಟ ಹೃತಿಕ್ ರೋಷನ್ 42ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮುಂಬೈನ ವರ್ಲಿಯ ಫೋರ್ ಸೀಜನ್ಸ್ ಹೊಟೇಲ್‌ನಲ್ಲಿ ಹೃತಿಕ್ ಅದ್ದೂರಿ ಪಾರ್ಟಿ ಅರೆಂಜ್ ಮಾಡಿದ್ದರು. ಈ ಪಾರ್ಟಿಯಲ್ಲಿ ರಾತ್ರಿ 10 ಗಂಟೆ ನಂತರವೂ ಹಾಡು ಕುಣಿತ ಇತ್ತು.
ಪಾರ್ಟಿಯಲ್ಲಿ ಬಾಲಿವುಡ್ ನ ಹಲವು ಸೆಲಬ್ರಿಟಿಗಳು ಹಾಜರಿದ್ದರು. ಹೃತಿಕ್ ಗೆಳೆಯ ಗೆಳತಿಯರು ಸಿಕ್ಕಾಪಟ್ಟೆ ಸೌಂಡ್ ಇಟ್ಕೊಂಡು ಡ್ಯಾನ್ಸ್ ಮಾಡಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೋರ್ವ ಪೊಲೀಸರಿಗೆ ದೂರು ಕೊಟ್ಟಿದ್ದ .
ತಡವಾಗಿ ಹೊಟೇಲ್ ಗೆ ಆಗಮಿಸಿದ ಪೊಲೀಸರು ಮಧ್ಯರಾತ್ರಿ 1 ಗಂಟೆ ಹೊತ್ತಲ್ಲಿ ಹೊಟೇಲ್‌ಗೆ ಬಂದು ಹೊಟೇಲ್ ಮ್ಯಾನೇಜರ್‌ಗೆ 25 ಸಾವಿರ ದಂಡ ವಿಧಿಸಿದರು. ಹೊಟೇಲ್ ಮಾಲೀಕರು ಹೃತಿಕ್‌ಗೆ 25 ಸಾವಿರ ದಂಡ ಪಾವತಿಸುವಂತೆ ಸೂಚಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ