ಲಾಲು ಪ್ರಸಾದ್ ಯಾದವ್ ಸಂದರ್ಶಿಸಲಿರುವ ಬಾಲಿವುಡ್ ನಟ ಇರ್ಫಾನ್ ಖಾನ್

ತಮ್ಮ ಮುಂದಿನ ಸಿನೆಮಾ 'ಮದಾರಿ'ಯ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಅಂತಾರಾಷ್ಟ್ರೀಯ ಖ್ಯಾತಿ ನಟ ಇರ್ಫಾನ್ ಖಾನ್ ಗುರುವಾರ ಬಿಹಾರ ರಾಜಧಾನಿ ಪಾಟ್ನಾಗೆ ಭೇಟಿ ನೀಡಲಿದ್ದು
ನಟ ಇರ್ಫಾನ್ ಖಾನ್
ನಟ ಇರ್ಫಾನ್ ಖಾನ್
Updated on
ಮುಂಬೈ: ತಮ್ಮ ಮುಂದಿನ ಸಿನೆಮಾ 'ಮದಾರಿ'ಯ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಅಂತಾರಾಷ್ಟ್ರೀಯ ಖ್ಯಾತಿ ನಟ ಇರ್ಫಾನ್ ಖಾನ್ ಗುರುವಾರ ಬಿಹಾರ ರಾಜಧಾನಿ ಪಾಟ್ನಾಗೆ ಭೇಟಿ ನೀಡಲಿದ್ದು ಆರ್ ಜೆ ಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಸಂದರ್ಶಿಸಲಿದ್ದಾರೆ. 
"ಪ್ರಪಂಚ ಎಚ್ಚರದಲ್ಲಿಲ್ಲ, ಅದು ನಗುತ್ತಲೂ ಇಲ್ಲ. ವಿಶ್ವದ ಹಾಸ್ಯ ಸಂವೇದನೆ ಸಾಯುತ್ತಿದೆ. ಆದರೆ ಒಬ್ಬ ರಾಜಕಾರಣಿ ಇದ್ದಾರೆ. ಅವರು ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೋ ಇಲ್ಲವೋ ಆದರೆ ಅವರ ಹಾಸ್ಯಕ್ಕಂತೂ ಎಂದಿಗೂ ಕೊನೆಯಿಲ್ಲ. ನಾನು ಶ್ರೀ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ. ನೋಡೋಣ ಏನಾಗುತ್ತದೋ" ಎಂದು ಇರ್ಫಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಲಾಲು ಅವರ ಜೊತೆಗಿನ ಇರ್ಫಾನ್ ಸಂದರ್ಶನ ಅವರ ಫೇಸ್ಬುಕ್ ಪುಟದಲ್ಲಿ ನೇರಪ್ರಸಾರಗೊಳ್ಳಲಿದೆ. 
ನಿಶಿಕಾಂತ್ ಕಾಮತ್ ನಿರ್ದೇಶನದ 'ಮದಾರಿ' ಜುಲೈ 15 ಕ್ಕೆ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com