ನಾನು ಶವವಲ್ಲ, ಗರ್ಭಿಣಿ ಅಷ್ಟೇ: ಮಾಧ್ಯಮಗಳ ವಿರುದ್ಧ ಕರೀನಾ ಆಕ್ರೋಶ

ಪಬ್ಲಿಸಿಟಿಗೋಸ್ಕರ ಮಾಧ್ಯಮಗಳು ತಾನು ಗರ್ಭಿಣಿಯಾಗಿರುವ ವಿಷಯದ ಬಗ್ಗೆ ಪದೇ ಪದೇ ಸುದ್ದಿ ಮಾಡುತ್ತಿರುವುದಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ಆಕ್ರೋಶ ವ್ಯಕ್ತ ...
ಕರೀನಾ ಕಪೂರ್
ಕರೀನಾ ಕಪೂರ್

ನವದಹೆಲಿ: ಪಬ್ಲಿಸಿಟಿಗೋಸ್ಕರ ಮಾಧ್ಯಮಗಳು ತಾನು ಗರ್ಭಿಣಿಯಾಗಿರುವ ವಿಷಯದ ಬಗ್ಗೆ ಪದೇ ಪದೇ ಸುದ್ದಿ ಮಾಡುತ್ತಿರುವುದಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬಾಲಿವುಡ್ ಬೇಬೋ ಗರ್ಭಿಣಿ ಎಂಬುದು ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಜುಲೈ 2ರಂದು ಸೈಫ್ ಅಲಿ ಖಾನ್ ಕೂಡ ಈ ವಿಷಯವನ್ನು ಮಾಧ್ಯಮಗಳ ಮುಂದೆ ಹೇಳಿದ್ದರು. ಸೈಫ್ ಈ ವಿಷಯ ಹೇಳ್ತಾ ಇದ್ದಂತೆ ಮಾಧ್ಯಮಗಳಿಗೆ ಬಿಸಿ ಬಿಸಿ ಸುದ್ದಿ ಸಿಕ್ಕಂತಾಗಿತ್ತು. ಗರ್ಭಿಣಿಯಾಗಿರುವ ಕರೀನಾ ಬಾಲಿವುಡ್ ನಿಂದ ದೂರ ಇರ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಇದೆಲ್ಲದಕ್ಕೂ ಕರೀನಾ ಉತ್ತರ ನೀಡಿದ್ದಾರೆ.

ನಾನು ಗರ್ಭಿಣಿ ಅಷ್ಟೇ, ಶವವಲ್ಲ. ಮಗುವಿಗೆ ಜನ್ಮ ನೀಡುವುದು ಸಾಮಾನ್ಯ ವಿಷಯ. ಈ ವಿಚಾರದಲ್ಲಿ ನನ್ನನ್ನು ಪ್ರತ್ಯೇಕವಾಗಿ ನೋಡುವ ಬದಲು ಮಾಧ್ಯಮಗಳು ಈ ವಿಷಯದಿಂದ ದೂರ ಇದ್ದರೆ ಒಳ್ಳೆಯದು. ಮೊದಲು ನನ್ನ ಕೆಲಸ ಹೇಗೆ ಸಾಗುತ್ತಿತ್ತೋ ಮುಂದೆಯೂ ಹಾಗೆ ಸಾಗುತ್ತದೆ. ಯಾರಿಗೆ ನನ್ನ ಜೊತೆ ಕೆಲಸ ಮಾಡಲು ಇಷ್ಟವಿಲ್ಲವೋ ಅವರು ಮಾಡಬೇಡಿ. ನಾವು 1800 ನೇ ಇಸವಿಯಲ್ಲಿಲ್ಲ, 2016 ರಲ್ಲಿದ್ದೇವೆ ನಾನು ಗರ್ಭಿಣಿ ಎಂಬ ವಿಷಯವನ್ನು ರಾಷ್ಟ್ರೀಯ ಅಪಘಾತ ಎನ್ನುವ ರೀತಿಯಲ್ಲಿ ಬಿಂಬಿಸಬೇಡಿ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com