ಶಾರೂಕ್ ಖಾನ್, ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯಾ ರೈ ಒಟ್ಟಿಗೆ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ 'ದೇವದಾಸ್' ನ 'ಡೋಲಾರೆ ಡೋಲಾರೆ' ಹಾಡಿಗೆ 14 ವರ್ಷದ ನಂತರ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಹೆಜ್ಜೆ ಹಾಕಿದ್ದಾರೆ.
ಸರ್ಬಜಿತ್ ಚಿತ್ರದ ಪ್ರಮೋಶ್ ಗಾಗಿ ಚಿತ್ರ ತಂಡ ಸ ರಿ ಗ ಮ ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಸ್ಪರ್ಧಿಯೊಬ್ಬರು ದೇವದಾಸ್ ಚಿತ್ರದ ಡೋಲಾರೆ ಹಾಡು ಹಾಡಿದ್ರು.
ಆ ಹಾಡೂ ಆರಂಭಗೊಳ್ಳುತ್ತಿದ್ದಂತೆ ಐಶ್ವರ್ಯ ರೈ ಅವರು ತಮ್ಮ ಶೂ ಕಳಚಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ರಣದೀಪ್ ಹೂಡಾ, ನಿರ್ದೇಶಕ ಒಮುಂಗ್ ಕುಮಾರ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.