
ಮುಂಬೈ: ಹಿಂದಿಯ ವಿವಾಹ ಚಿತ್ರದ ಮುದ್ದು ಮುಖದ ನಾಯಕಿ ಅಮ್ರಿತಾ ರಾವ್ ಭಾನುವಾರ ರೇಡಿಯೋ ಜಾಕಿ ಅನ್ಮೋಲ್ ಅವರನ್ನು ಮದುವೆಯಾಗಿದ್ದಾರೆ.
ಸ್ವತಃ ಅನ್ಮೋಲ್ ಅವರೇ ತಮ್ಮ ಟ್ವಿಟ್ಟರ್ ಮತ್ತು ಫೇಸ್ ಬುಕ್ ಪುಟದಲ್ಲಿ ವಿಷಯ ಖಚಿತಪಡಿಸಿದ್ದಾರೆ.
'' ಏಳು ವರ್ಷಗಳ ಹಿಂದೆ ಆರಂಭವಾದ ಸಂದರ್ಶನ ಮುಂದುವರಿಯುತ್ತಿದೆ, ಅದು ಇಂದು ಮತ್ತಷ್ಟು ಗಟ್ಟಿಯಾಗಿದೆ! ಈಗಷ್ಟೇ ಮದುವೆಯಾಗಿದ್ದೇವೆ, ನನಗೆ ಮತ್ತು ಅಮ್ರಿತಾಗೆ ನಿಮ್ಮ ಶುಭ ಹಾರೈಕೆಗಳು ಬೇಕು'' ಎಂದು ಅನ್ಮೋಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಅಮ್ರಿತಾ ಅವರು ಪ್ರಸ್ತುತ ಟಿವಿ ಶೋ ''ಮೇರಿ ಆವಾಜ್ ಹೈ ಪೆಹಚಾನ್ ಹೈ'' ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮ್ರಿತಾ ಇಶ್ಕ್ ವಿಶ್ಕ್, ಜಾಲಿ ಎಲ್ ಎಲ್ ಬಿ, ದೀವಾರ್, ಮೈ ಹೂ ನಾ ಮತ್ತು ದ ಲೆಜೆಂಡ್ ಆಫ್ ಭಗತ್ ಸಿಂಗ್ ನಲ್ಲಿ ಅಭಿನಯಿಸಿದ್ದಾರೆ. ಈ ಜೋಡಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
Advertisement