ಮರಾಠಿ ಚಿತ್ರದ ಹಾಡಿಗೆ ಪ್ರಿಯಾಂಕ ಛೋಪ್ರಾ ಹಿನ್ನೆಲೆ ಗಾಯನ: ವೈರಲ್ ಆಯ್ತು ಸಾಂಗ್

ಮರಾಠಿಯ ‘ವೆಂಟಿಲೇಟರ್‌’ ಸಿನಿಮಾದ ‘ಬಾಬಾ’ ಗೀತೆಗೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಿನ್ನೆಲೆ ಗಾಯಕಿಯಾಗಿದ್ದಾರೆ...
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ

ಮುಂಬಯಿ: ಮರಾಠಿಯ ‘ವೆಂಟಿಲೇಟರ್‌’ ಸಿನಿಮಾದ ‘ಬಾಬಾ’ ಗೀತೆಗೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಿನ್ನೆಲೆ ಗಾಯಕಿಯಾಗಿದ್ದಾರೆ.

ಪ್ರಿಯಾಂಕಾ ಹಾಡಿರುವ ಮೊದಲ ಮರಾಠಿ ಹಾಡು ಇದಾಗಿದೆ. ಸುಮಾರು 4 ನಿಮಿಷಗಳ ಈ ಗೀತೆಗೆ ‘ಪಿಗ್ಗಿ’ ದನಿಯಾಗಿದ್ದಾರೆ. ತಂದೆಯ ಕುರಿತಾದ ಗೀತೆ ಇದಾಗಿದ್ದು, ಈ ಹಾಡಿನ ವಿಡಿಯೊ ಈಗ ವೈರಲ್‌ ಆಗಿದೆ.

ನ.2ರಂದು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿರುವ ಈ ಹಾಡನ್ನು ಈವರೆಗೆ 20 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.ಈ ಹಾಡಿನ ವಿಡಿಯೊ ಟ್ವೀಟ್‌ ಮಾಡಿರುವ ಪ್ರಿಯಾಂಕಾ, ‘ಇದು ನನ್ನ ಮೊದಲ ಮರಾಠಿ ಗೀತೆ. ಏನಾದರೂ ತಪ್ಪುಗಳಾಗಿದ್ದರೆ ಕ್ಷಮಿಸಿ’ ಎಂದಿದ್ದಾರೆ.

ಮೊಟ್ಟ ಮೊದಲ ಬಾರಿಗೆ ನಿರ್ಮಾಪಕಿಯಾಗಿರುವ ಪ್ರಿಯಾಂಕಾ ಚೋಪ್ರಾ ಪರ್ಪಲ್ ಪೆಬೆಲ್ ಬ್ಯಾನರ್ ಅಡಿ ಮರಾಠಿ ಚಿತ್ರ ವೆಂಟಿಲೇಟರ್ ನಿರ್ಮಿಸಿದ್ದಾರೆ. ಪ್ರಿಯಾಂಕಾ ಹಾಡಿರುವ ಸಾಂಗ್ ಗೆ ಮನೋಜ್ ಯಾದವ್ ಸಾಹಿತ್ಯ ಬರೆದಿದ್ದು, ರೋಹನ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com