ಪಿಂಕ್
ಬಾಲಿವುಡ್
ವಿಶ್ವಸಂಸ್ಥೆ ಕಚೇರಿಯಲ್ಲಿ ಬಿಗ್ ಬಿ ಅಭಿನಯದ ಪಿಂಕ್ ಚಿತ್ರ ವಿಶೇಷ ಪ್ರದರ್ಶನ
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ತಾಪಸೀ ಪನ್ನೂ ಅಭಿನಯದ ಹಿಂದಿ ಚಿತ್ರ ಪಿಂಕ್ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ...
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ತಾಪಸೀ ಪನ್ನೂ ಅಭಿನಯದ ಹಿಂದಿ ಚಿತ್ರ ಪಿಂಕ್ ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಪ್ರದರ್ಶನಗೊಳ್ಳುವ ವಿಶೇಷ ಗೌರವಕ್ಕೆ ಪಾತ್ರವಾಗಿದೆ.
ಮಹಿಳಾ ಸಬಲೀಕರಣ, ಆಧುನಿಕ ಮಹಿಳೆಯರು ಎದುರಿಸುವ ಲೈಂಗಿಕ ಕಿರುಕುಳದ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಬಚ್ಚನ್ ವಕೀಲರ ಪಾತ್ರದಲ್ಲಿ ನಟಿಸಿದ್ದಾರೆ.
ಪಿಂಕ್ ಚಿತ್ರ ಪ್ರಸಕ್ತ ವರ್ಷ ಉತ್ತಮ ಚಿತ್ರಗಳಲ್ಲಿ ಒಂದಾಗಿತ್ತು. ವಿಶೇಷ ಪ್ರದರ್ಶನಕ್ಕೆ ಆಹ್ವಾನ ಬಂದಿರುವುದು ಹೆಮ್ಮೆಯ ಪ್ರತೀಯವಾಗಿದೆ ಎಂದು ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿ ಕೊಂಡಿದ್ದಾರೆ.

