ನಿಗದಿತ ದಿನಕ್ಕೆ ಏ ದಿಲ್ ಹೈ ಮುಷ್ಕಿಲ್ ಚಿತ್ರ ಬಿಡುಗಡೆ: ನಿರ್ಮಾಪಕರು

ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿ ಬಿಡುಗಡೆಯ ವಿವಾದಕ್ಕೆ ಸಿಲುಕಿರುವ ಹಿಂದಿ ಚಲನಚಿತ್ರ ಏ ದಿಲ್...
ಏ ದಿಲ್ ಹೈ ಮುಷ್ಕಿಲ್ ಚಿತ್ರದ ಸ್ಟಿಲ್
ಏ ದಿಲ್ ಹೈ ಮುಷ್ಕಿಲ್ ಚಿತ್ರದ ಸ್ಟಿಲ್
ಮುಂಬೈ: ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿ ಬಿಡುಗಡೆಯ ವಿವಾದಕ್ಕೆ ಸಿಲುಕಿರುವ ಹಿಂದಿ ಚಲನಚಿತ್ರ ಏ ದಿಲ್ ಹೈ ಮುಷ್ಕಿಲ್ ಪೂರ್ವ ನಿಗದಿಯಂತೆ ಇದೇ ತಿಂಗಳ 28ರಂದು ಬಿಡುಗಡೆಯಾಗಲಿದೆ ಎಂದು ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋ ತಿಳಿಸಿದೆ.
ಸೆನ್ಸಾರ್ ಬೋರ್ಡ್ ನಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಗೆ ಬರುತ್ತಿರುವ ಬಹು ನಿರೀಕ್ಷಿತ ಚಿತ್ರ ಏ ದಿಲ್ ಹೈ ಮುಷ್ಕಿಲ್ ನ್ನು ಕರಣ್ ಜೋಹರ್ ತಮ್ಮ ಹೋಂ ಬ್ಯಾನರ್ ನಡಿ ನಿರ್ಮಿಸಿದ್ದು ರಣಬೀರ್ ಕಪೂರ್, ಅನುಷ್ಕಾ ಶರ್ಮ, ಐಶ್ವರ್ಯಾ ರೈ ಪ್ರಧಾನವಾಗಿ ನಟಿಸಿದ್ದಾರೆ. 
ಇನ್ನೊಂದೆಡೆ ಸಿನಿಮಾ ಮಾಲಿಕರು ಮತ್ತು ವಿತರಕರ ಭಾರತೀಯ ಸಂಘ, ಈ ಚಿತ್ರದಲ್ಲಿ ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿರುವುದರಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ್ ರಾಜ್ಯಗಳಲ್ಲಿ ಬಿಡುಗಡೆ ಮಾಡದಂತೆ ತಡೆಹಿಡಿದಿದ್ದಾರೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com