

ಮುಂಬಯಿ: ನನಗೆ ನಿರ್ಮಾಣಕ್ಕಿಂತ ಚಿತ್ರ ನಿರ್ದೇಶನದಲ್ಲಿ ಹೆಚ್ಚಿನ ಆಸಕ್ತಿಯಿದೆ ಎಂದು ನಟಿ ಕಂಗನಾ ರಣಾವತ್ ಹೇಳಿದ್ದಾರೆ.
ಸದ್ಯ ಕಂಗನಾ ಶಾಹಿದ್ ಕಪೂರ್ ಮತ್ತು ಸೈಫ್ ಅಲಿ ಖಾವ್ ಜೊತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಸ್ನೇಹಿತ ಸೋನು ಸೂದ್ ಮತ್ತು ನಾನು ಸೇರಿ ಈ ಮೊದಲು ಒಂದು ಸಿನಿಮಾ ಮಾಡಿದ್ದೆವು, ಏಕ್ ನಿರಂಜನ್ ಎಂಬ ಆ ಚಿತ್ರವನ್ನ ಪೂರಿ ಜಗನ್ನಾದ್ ನಿರ್ದೇಶನ ಮಾಡಿದ್ದರು. ಅದರಲ್ಲಿ ಸೋನು ಸೂದ್ ಅಭಿನಯಿಸಿದ್ದರು.
ಆತನ ಜೊತೆಗಿನ ನಟನಾ ಅನುಭವ ಅದ್ಭತವಾದದ್ದು, ಅದಾದ ನಂತರ ನಾವಿಬ್ಬರು ಮತ್ತೆ ಒಟ್ಟಿಗೆ ಕೆಲಸ ಮಾಡಲಾಗಲಿಲ್ಲ. ನಾವಿಬ್ಬರು ಮತ್ತೆ ಒಟ್ಟಿಗೆ ಕೆಲಸ ಮಾಡುವಂತ ಅವಕಾಶವನ್ನು ದೇವರು ನಮಗೆ ಶೀಘ್ರವೇ ನೀಡಲಿ ಎಂದು ಕಂಗನಾ ಹೇಳಿದ್ದಾರೆ.
ಸೋನು ಸೂದ್ ನಿರ್ಮಾಪಕರಾದರು. ಆದರೆ ನಾನು ಬೇರೆ ಪ್ರಯತ್ನ ಮಾಡಲಿಲ್ಲ. ನನಗೆ ನಿರ್ದೇಶನದಲ್ಲಿ ಆಸಕ್ತಿ ಇರುವಷ್ಟು ಚಿತ್ರ ನಿರ್ಮಾಣ ಮಾಡುವುದರಲ್ಲಿ ಇಲ್ಲ ಎಂದು ಅವರು ಹೇಳಿದ್ದಾರೆ.