ಪಾಕಿಸ್ತಾನಿ ಕಲಾವಿದರ ನಿಷೇಧ ಕರೆಯನ್ನು ಪ್ರಶ್ನಿಸಿದ ಬಾಲಿವುಡ್ ನಿರ್ದೇಶಕ ವಿಕಾಸ್

'ಕ್ವೀನ್' ಖ್ಯಾತಿಯ ನಿರ್ದೇಶಕ ವಿಕಾಸ್ ಬಹ್ಲ್, ಅವರು ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸುವುದರಿಂದ ತೊಂದರೆಗೆ ಪರಿಹಾರ ಸಿಗುವುದಿಲ್ಲ ಎಂದಿದ್ದಾರೆ. ಮುಂದಿನ ಕ್ರಮಗಳ ಬಗ್ಗೆ ಚಿಂತೆ ಮಾಡಬೇಕೆ
ನಿರ್ದೇಶಕ ವಿಕಾಸ್ ಬಹ್ಲ್
ನಿರ್ದೇಶಕ ವಿಕಾಸ್ ಬಹ್ಲ್
Updated on
ನವದೆಹಲಿ: 'ಕ್ವೀನ್' ಖ್ಯಾತಿಯ ನಿರ್ದೇಶಕ ವಿಕಾಸ್ ಬಹ್ಲ್, ಅವರು ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸುವುದರಿಂದ ತೊಂದರೆಗೆ ಪರಿಹಾರ ಸಿಗುವುದಿಲ್ಲ ಎಂದಿದ್ದಾರೆ. ಮುಂದಿನ ಕ್ರಮಗಳ ಬಗ್ಗೆ ಚಿಂತೆ ಮಾಡಬೇಕೆ ಹೊರತು ಅವರನ್ನು ದೇಶದಿಂದ ಹೊರದಬ್ಬುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದಿದ್ದಾರೆ. 
"ಸಮಸ್ಯೆ ಪರಿಹರಿಸುವುದರ ಬಗ್ಗೆ ನಾವು ತೆಗೆದುಕೊಳ್ಳುತ್ತಿರುವ ನಡೆಯ ಬಗ್ಗೆ ನನಗೆ ತಿಳಿಯಬೇಕಿದೆ... ಅವರು ದೇಶದಿಂದ ಹೊರಟ ಮೇಲೆ ಮುಂದಿನ ಕ್ರಮವೇನು?" ಎಂದು ಬಹ್ಲ್ ಪ್ರಶ್ನಿಸಿದ್ದಾರೆ. 
48 ಘಂಟೆಗಳಲ್ಲಿ ಎಲ್ಲ ಪಾಕಿಸ್ತಾನಿ ಕಲಾವಿದರು ದೇಶ ತೊರೆಯಬೇಕು ಇಲ್ಲದಿದ್ದರೆ ಮುಂದಿನ ಕ್ರಮ ಎದುರಿಸಿ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ನೀಡಿದ್ದ ಎಚ್ಚರಿಕೆಯ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. 
ಜಮ್ಮು ಮಾತು ಕಾಶ್ಮೀರದ ಉರಿಯಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ 18 ಸೈನಿಕರು ಮೃತಪಟ್ಟ ಹಿನ್ನಲೆಯಲ್ಲಿ ಎಂ ಎನ್ ಎಸ್ ಈ ಬೆದರಿಕೆಯನ್ನು ಸೆಪ್ಟೆಂಬರ್ 23 ರಂದು ಹಾಕಿತ್ತು. 
'ಏ ದಿಲ್ ಹೈ ಮುಷ್ಕಿಲ್' ಮತ್ತು 'ರಯೀಸ್' ಸೇರಿದಂತೆ ಪಾಕಿಸ್ತಾನಿ ಕಲಾವಿದರನ್ನು ತೊಡಗಸಿಕೊಂಡಿರುವ ಯಾವುದೇ ಸಿನೆಮಾ ಬಿಡುಗಡೆ ಮಾಡದಂತೆ ಕೂಡ ಪಕ್ಷ ಎಚ್ಚರಿಕೆ ನೀಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com