ಐಶ್ವರ್ಯಾ ಅವರ ಸ್ಲ್ಯಾಮ್ ಬುಕ್ ನಲ್ಲಿ ಏನಿದೆ, ಅವರಲ್ಲಿ ಏನು ಪ್ರಶ್ನೆಗಳನ್ನು ಕೇಳಲಾಗಿತ್ತು, ಅದಕ್ಕೆ ಅವರು ಏನು ಉತ್ತರ ನೀಡಿದ್ದರು ಎಂಬ ಕುತೂಹಲ ಕಾಡುವುದು ಸಹಜ. ಐ ಲವ್ ಎಂಬ ಪ್ರಶ್ನೆಗೆ ದ ಐಡಿಯಾ ಆಫ್ ಬೀಯಿಂಗ್ ಇನ್ ಲವ್ ಎಂದು ಐಶ್ ಉತ್ತರಿಸಿದ್ದಾರೆ. ನೀವು ಯಾರನ್ನು ಪ್ರೀತಿಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ನಾನು ಕತ್ತಲಲ್ಲಿರುವಾಗ ಬೆಳಕು ತೋರಿಸುವವರತ್ತ ಎಂದು ಉತ್ತರಿಸಿದ್ದಾರೆ. ಪ್ರಾಮಾಣಿಕತೆ, ಪ್ರೀತಿ, ನಂಬಿಕೆಗಳೇ ತಮ್ಮ ಬಲ, ಜೀವನದ ಪ್ರತಿ ಕ್ಷಣವನ್ನು ಜೀವಿಸುವುದು ಪ್ಯಾಷನ್, ಐಶ್ವರ್ಯಾ ಅವರ ಬಹುದೊಡ್ಡ ಅಗತ್ಯತೆ ಹಣ, ಮೇಕಪ್ ಅಥವಾ ಸ್ಟಾರ್ ಪಟ್ಟ ಅಲ್ಲವಂತೆ ಪರಿಶುದ್ಧ ವಾತಾವರಣ ನನ್ನ ಅಗತ್ಯ ಎಂದು ಹೇಳಿದ್ದಾರೆ.